Saturday, August 13, 2022

Latest Posts

ಜೈಲಿನಿoದ ವಿನಯ್ ಕುಲಕರ್ಣಿಗೆ ಸಿಗದ ಮುಕ್ತಿ: ಜಾಮೀನು ಅರ್ಜಿ ಒಂದು ವಾರ ಮುಂದೂಡಿಕೆ

ಹೊಸ ದಿಗಂತ ವರದಿ, ಧಾರವಾಡ:

ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಗುರುತರ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಬುಧವಾರ ಧಾರವಾಡ ಹೈಕೋರ್ಟ್ ಪೀಠ ಪುನಃ ಮುಂದೂಡಿದೆ.
ಧಾರವಾಡದ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿದ ಹಿನ್ನೆಲೆ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ್ದ ಏಕಸದಸ್ಯ ಪೀಠ, ಕಳೆದ ವಿಚಾರಣೆಯಲ್ಲಿ ಸಿಬಿಐ ಪರ ವಕೀಲರಿಗೆ ತಕರಾರು ಸಲ್ಲಿಸಲು ಸೂಚಿಸಿತ್ತು.
ಅದರಂತೆ ಬುಧವಾರ ವಿಚಾರಣೆ ವೇಳೆ ಸಿಬಿಐ ಪರ ವಕೀಲರು ತಕರಾರು ಸಲ್ಲಿಸಿದರು. ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ವಿಚಾರಣೆಯನ್ನು ಒಂದು ವಾರ ಮುಂದೂಡಿದೆ.
ಕಳೆದ ಎರಡು ತಿಂಗಳಿoದ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿ ನ್ಯಾಯಾಲಯ ಮುಂದೂಡಿದ ಕಾರಣ ಜೈಲಿನಿಂದ ಮುಕ್ತಿ ಸಿಗದ ಮಾಜಿ ಸಚಿವರಿಗೆ ಬೆಳಗಾವಿ ಹಿಂಡಲಗಾ ಜೈಲೇ ಗತಿಯಾಗಿದೆ.
ಇದಲ್ಲದೇ, ವಿನಯ ಮಾವ ಚಂದ್ರಶೇಖರ ಇಂಡಿ ಅಲಿಯಾಸ್ ಚಂದೂ ಮಾಮಾ ಹತ್ಯೆಗೆ ಭೀಮಾ ತೀರದಿಂದ ಶಸ್ತ್ರಾಸ್ತ್ರ ಪೂರೈಕೆ ಆರೋಪದಡಿ ಬಂಧನದಲ್ಲಿದ್ದು, ಸಿಬಿಐ ಮತ್ತಾö್ಯರನ್ನು ಕಂಬಿ ಹಿಂದೆ ಕಳಿಸಲಿದೆಂದು ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss