Saturday, June 25, 2022

Latest Posts

ಜೈಲುವಾಸ ಮುಗಿಸಿದ ಮೇಲೂ ಕೈ ಚಳಕ ತೋರಿದ ದರೋಡೆಕೋರ: ಪೊಲೀಸರಿಂದ ಫೈರಿಂಗ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೆ ತನ್ನ ಕೈ ಚಳಕ ತೋರಿಸಿದ ದರೋಡೆ ಕೋರನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಕಳೆದ ತಿಂಗಳಲ್ಲಿ ಜಾಮೀನು ಪಡೆದು ಹೊರಬಂದು ಮತ್ತೆ ತನ್ನ ದರೋಡೆ ಮುಂದುವರಿಸಿದ್ದಾನೆ. ಬೆಂಗಳೂರಿನಲ್ಲಿ ಕಳೆದ 10 ದಿನದಲ್ಲಿ 10 ದರೋಡೆ ಮಾಡಿದ್ದ ಅನ್ಬುನ್ ಮತ್ತು ಆತನ ತಂಡವನ್ನು ಪೊಲೀಸರು ಹುಡುಕುತ್ತಿದ್ದರು. ಲಾರಿ ಡ್ರೈವರ್ ಗೆ ಚಾಕುವಿನಿಂದ ಇರಿದು 30 ಸಾವಿರ ರೂ ಗಳನ್ನು ದೋಚಿದ್ದ ಕುರಿತು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಅನ್ಬುನ್​ ಸಹಚರ​​ನನ್ನು ಪೊಲೀಸರು ಬಂಧಿಸಿದ್ದರು.

ನಂದಿನಿ ಲೇಔಟ್ ನ ಕೂಲಿ ಬ್ರಿಡ್ಜ್ ಬಳಿ ಇರುವ ಮಾಹಿತಿ ಪಡೆದ ಪೊಲೀಸರು ಅನ್ಬುನ್ ನನ್ನು ಬಂಧಿಸಲು ತೆರಳಿದ್ದರು. ಪರಾರಿಯಾಗಲು ಯತ್ನಿಸಿದ ಅನ್ಬುನ್ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ನಂದಿನಿ ಲೇಔಟ್ ಪೊಲೀಸ್ ಠಾಣಾ ಪಿಎಸ್’ಐ ಜೋಗಾನಂದ್ ಅನ್ಬನ್ ಕಾಲಿಗೆ ಶೂಟ್ ಮಾಡಿದ್ದಾರೆ.

ಈ ಘಟನೆಯಲ್ಲಿ ಗಾಯಗೊಂಡ ಕಾನ್ಸ್​​ಟೇಬಲ್​ ಹಾಗೂ ಆರೋಪಿ ಅನ್ಬನ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss