Thursday, August 18, 2022

Latest Posts

ಜೋಗ್ ಫಾಲ್ಸ್‌ನಲ್ಲಿ ಪ್ರಾರಂಭಿಸಲಾಗುತ್ತಿದೆ 80 ಲಕ್ಷ ರೂ. ವೆಚ್ಚದಲ್ಲಿ ಜಿಪ್ ಲೈನ್ ಸಾಹಸಯಾನ !

ಶಿವಮೊಗ್ಗ: ರಾಜ್ಯದಲ್ಲಿ ಮೊದಲ ಬಾರಿಗೆ ಪ್ರವಾಸಿ ತಾಣವೊಂದರಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ಜಿಪ್ ಲೈನ್ ಸಾಹಸಯಾನವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಜೋಗ ಜಲಪಾತದಲ್ಲಿ ಶನಿವಾರ ಕೆ.ಪಿ.ಸಿ. ಪ್ರವಾಸಿ ಮಂದಿರದಿಂದ ರಾಣಿಫಾಲ್ಸ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ 80 ಲಕ್ಷ ರೂ. ವೆಚ್ಚದ ಜಿಪ್‌ಲೈನ್ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಗೆ ಸಂಬಂಧಪಟ್ಟಂತೆ ಈಗಾಗಲೆ 40 ಲಕ್ಷ ರೂ. ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು. ಜಿಪ್‌ಲೈನ್ ಸಾಹಸ ಕ್ರೀಡೆಯಲ್ಲಿ ಆಸಕ್ತಿ ಇರುವ ಪ್ರವಾಸಿಗರಿಗೆ ಹೆಚ್ಚು ಆಪ್ತವಾಗುತ್ತದೆ. ಒಂದು ಬಾರಿಗೆ ಇಬ್ಬರೂ ರೋಪ್‌ವೇ ಮೂಲಕ ರಾಣಿಫಾಲ್ಸ್ ಹತ್ತಿರ ಇರುವ ವೀಕ್ಷಣಾ ಗೋಪುರಕ್ಕೆ ಹೋಗಬಹುದು. ಯೋಜನೆ ಕೈಗೊಳ್ಳುವಾಗ ಅಗತ್ಯ ಮುಂಜಾ ಗೃತೆಯನ್ನು ಸಹ ತೆಗೆದುಕೊಳ್ಳಲಾಗಿದೆ. ಜಿಪ್‌ಲೈನ್ ಕಾಮಗಾರಿಯು 450 ಮೀಟರ್ ಉದ್ದದಲ್ಲಿ ಎರಡು ರೋಪ್‌ಗಳ ಮೂಲಕ ನಿರ್ಮಿಸಲಾಗುತ್ತದೆ. ಜಿಪ್‌ಲೈನ್‌ಗೆ ಸಂಬಂಧಪಟ್ಟಂತೆ ಭದ್ರತೆಯನ್ನು ಗಮನದಲ್ಲಿ ಇರಿಸಿಕೊಳ್ಳಲಾಗಿದೆ ಎಂದರು.
ಅತಿಹೆಚ್ಚು ಪ್ರವಾಸಿಗರು ಜೋಗ ವೀಕ್ಷಣೆಗೆ ಮಳೆಗಾಲದಲ್ಲಿ ಬರುತ್ತಾರೆ. ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸಲು ಈ ಪ್ರದೇಶವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲು ಗಮನ ಹರಿಸಲಾಗಿದೆ ಎಂದರು.
ಶಾಸಕ ಹರತಾಳು ಹಾಲಪ್ಪ, ಮೇಘರಾಜ್, ಎಸ್.ದತ್ತಾತ್ರಿ, ಜ್ಯೋತಿ ಪ್ರಕಾಶ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!