Thursday, June 30, 2022

Latest Posts

ಜೋಡಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಹೊಸ ದಿಗಂತ ವರದಿ ಮೈಸೂರು:

ಮೈಸೂರಿನ ಎಲೆ ತೋಟದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನಡೆದಿದ್ದ ಇಬ್ಬರು ವ್ಯಕ್ತಿಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗೌರಿಶಂಕರ ನಗರ ಸರ್ವೆ ನಂ.101 ನಿವೇಶನ ಸಂಖ್ಯೆ 2 ರ ಜಾಗದ ವಿಚಾರದಲ್ಲಿ ಸೋಮೇಶ್ (ಮೀಸೆ ಸ್ವಾಮಿ) ಎಂಬುವನಿಗೂ ಕಿಶನ್ ಎಂಬುವರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಕಿಶನ್ ಹಾಗೂ ಕಿರಣ್ ಎಂಬುವರನ್ನು ಹತ್ಯೆ ಮಾಡಿ, ಮಧು ಎಂಬುವರನ್ನು ಗಾಯಗೊಳಿಸಲಾಗಿತ್ತು.

ಗೌರಿಶಂಕರ ನಗರದ ಮಧು, ಚಾಮುಂಡಿಬೆಟ್ಟದ ಪಾದ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂಭಾಗ ನಿವಾಸಿ ಮೀಸೆ ಸ್ವಾಮಿ, ವಿದ್ಯಾರಣ್ಯಪುರಂನ ರಘು ಎಂಬುವರನ್ನು ಬಂಧಿಸಿದ್ದ ಕೆ.ಆರ್.ಠಾಣೆಯ ಪೊಲೀಸರು, ಇದೀಗ ತಲೆ ಮರೆಸಿಕೊಂಡಿದ್ದ ಮೈಸೂರಿನ ಚಾಮುಂಡಿಬೆಟ್ಟದ ಪಾದದ ಅಯ್ಯಪ್ಪಸ್ವಾಮಿ ದೇವಸ್ಥಾನದ ಹಿಂಭಾಗ ನಿವಾಸಿ ಆರೋಪಿ ದಿಲೀಪ್‌ನನ್ನು ಇಂದು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರದ ಡಿ.ಸಿ.ಪಿ ಡಾ.ಎ.ಎನ್.ಪ್ರಕಾಶ್‌ಗೌಡ ನೇತೃತ್ವದಲ್ಲಿ ಎ.ಸಿ.ಪಿ.ಕೃಷ್ಣರಾಜ ವಿಭಾಗದ ಪೂರ್ಣಚಂದ್ರ ತೇಜಸ್ವಿ ಮಾರ್ಗದರ್ಶನದಲ್ಲಿ ಕೃಷ್ಣರಾಜ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಲ್.ಶ್ರೀನಿವಾಸ್ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss