Thursday, August 18, 2022

Latest Posts

ಜೋ ಬೈಡನ್‌, ಕಮಲಾ ಹ್ಯಾರಿಸ್​ಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್: 

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್​ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರೇ ಉಪಾಧ್ಯಕ್ಷರಾಗಿ ನೀವು ಭಾರತ ಹಾಗೂ ಅಮೆರಿಕದ ಬಾಂಧವ್ಯ ವೃದ್ಧಿಗೆ ಶ್ರಮಿಸಿದ್ದನ್ನು  ನೊಡಿದ್ದೇನೆ. ನಿಮ್ಮ ಅಭೂತಪೂರ್ವ ಜಯಕ್ಕೆ ನನ್ನ ಅಭಿನಂದನೆಗಳು. ಭಾರತ ಹಾಗೂ ಅಮೆರಿಕ ನಡುವಿನ ಬಾಂಧವ್ಯ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಶುಭಹಾರೀಸಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ ಹೃತ್ಪೂರ್ವಕ ಅಭಿನಂದನೆಗಳು ಕಮಲಾ ಹ್ಯಾರಿಸ್​! ನಿಮ್ಮ ಅಭೂತಪೂರ್ವ ಗೆಲುವು ನಿಮ್ಮ ಹೆಮ್ಮೆಯಷ್ಟೇ ಅಲ್ಲ, ಎಲ್ಲ ಇಂಡಿಯನ್ ಅಮೆರಿಕನ್ನರ ಹೆಮ್ಮೆ ಮತ್ತು ಗೆಲುವು ಕೂಡ ಆಗಿದೆ.ನೀವು ಹೆಮ್ಮೆಯ ಮಹಿಳಾ ರಾಜಕಾರಣಿಯಾಗಿ ಹೊಸ ಮಾರ್ಗವನ್ನು ರೂಪಿಸಿದ್ದೀರಿ ನಿಮಗೆ ಅಭಿನಂದನೆಗಳು, ಭಾರತ ಹಾಗೂ ಯುಎಸ್ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುತ್ತೀರಿ ಎಂಬ ಭರವಸೆಯಿದೆ ಹಾಗೂ ಇಂಡೋ ಅಮೆರಿಕನ್ ಬೆಂಬಲಕ್ಕೆ ನೀವು ನಿಲ್ಲುತ್ತೀರಿ ಎಂದು ಆಶಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!