Saturday, August 13, 2022

Latest Posts

ಜೋ ಬೈಡನ್ ಗೆ ಅರಬ್ಬಿಯಲ್ಲಿ ಶುಭಾಶಯ ಕೋರಿ ಫಜೀತಿಗೊಳ್ಳಪಟ್ಟ ಪಾಕ್ ಪ್ರಧಾನಿ ಇಮ್ರಾನ್‌ ಖಾನ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್‌ ಅವರಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಕೂಡ ಜೋ ಬೈಡನ್‌ ಅವರ ಗೆಲುವಿಗೆ ಅತೀವ ಹರ್ಷ ವ್ಯಕ್ತಪಡಿಸಿ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದಾರೆ.
ಅವ ಉರ್ದು ಭಾಷೆಯಲ್ಲಿ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದಾರೆ. ಆದರೆ ಅದನ್ನು ಗೂಗಲ್‌ ಟ್ರಾನ್ಸ್‌ಲೇಷನ್‌ ಸಹಾಯ ಪಡೆದು ಇಂಗ್ಲಿಷ್‌ನಲ್ಲಿ ತರ್ಜುಮೆ ಮಾಡಿ ಅದನ್ನು ಓದಲಾಗಿದೆ.
ಹೆಚ್ಚಾಗಿ ಗೂಗಲ್‌ ಟ್ರಾನ್ಸ್‌ಲೇಷನ್‌ ಮಾಡುವಾಗ ಅಲ್ಲಿ ಎಡವಟ್ಟು ಆಗುವುದು ಸರ್ವೇ ಸಾಮಾನ್ಯ . ಅದೇ ರೀತಿ ಟ್ರಾನ್ಸ್‌ಲೇಷನ್‌ ಮಾಡಿದರೆ ಅದನ್ನು ಓದಲು ಹಾಸ್ಯಾಸ್ಪದವಾಗಿರುತ್ತದೆ. ಹೀಗೆ ಇಮ್ರಾನ್‌ ಖಾನ್‌ ಅವರು ಉರ್ದು ಭಾಷೆಯಲ್ಲಿ ಬರೆದಿರುವ ಅಭಿನಂದನೆಯನ್ನು ಗೂಗಲ್‌ ಟ್ರಾನ್ಸ್‌ಲೇಟ್‌ ಮಾಡಿದಾಗ ಮಹಾ ಎಡವಟ್ಟಾಗಿ ಹೋಗಿದೆ.
ಹೌದು , ಇಮ್ರಾನ್‌ ಖಾನ್‌ ಹಾಕಿದ್ದೇನು? ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ಅದು ಏನಾಗಿದೆ ಎನ್ನುವುದು ಇಲ್ಲಿದೆ ನೋಡಿ.
ನಿಜವಾಗಿಯೂ ಇಮ್ರಾನ್‌ ಖಾನ್‌ ಉರ್ದು ಭಾಷೆಯಲ್ಲಿ ಹೇಳಿದ್ದೇನೆಂದರೆ: ‘ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಿಗೆ ಅಭಿನಂದನೆಗಳು. ರಾಷ್ಟ್ರೀಯ ಸಂಪತ್ತನ್ನು ಲೂಟಿ ಮಾಡುವವರ ಹಾಗೂ ತೆರಿಗೆ ವಂಚನೆ ಮಾಡುವವರ ವಿರುದ್ಧ ಸಮರ ಸಾರಲು ನಾವು ನಿಮ್ಮ ಜತೆ ಕೈಜೋಡಿಸುತ್ತೇವೆ. ಈ ಸೇವೆಗಾಗಿ ನಾವು ಎದುರುನೋಡುತ್ತಿದ್ದೇವೆ’ ಎಂದು ಬರೆದಿದ್ದಾರೆ.
ಆದರೆಇದನ್ನು ಗೂಗಲ್‌ ಟ್ರಾನ್ಸ್‌ಲೇಟಷನ್‌ ಮೂಲಕ ತುರ್ಜುಮೆ ಮಾಡಿದಾಗ, ಅದು ಈ ರೀತಿ ಬದಲಾಗಿದೆ. ಹೊಸ ನಾಯಕರಿಗೆ ಅಭಿನಂದನೆಗಳು, ‘ಕದ್ದ ರಾಷ್ಟ್ರೀಯ ಸಂಪತ್ತನ್ನು ಮುಚ್ಚಿಹಾಕುವ ಮತ್ತು ಅಕ್ರಮ ತೆರಿಗೆ ಧಾಮಗಳ ಭ್ರಷ್ಟ ನಾಯಕರು’ ಇವರಿಗೆ ಅಭಿನಂದನೆ. ಇವರ ಜತೆ ಕೆಲಸ ಮಾಡಲು ನಾನು ಎದುರು ನೋಡುತ್ತೇನೆ’ ಎಂದು ಅನುವಾದಗೊಂಡಿದೆ! ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇಮ್ರಾನ್‌ ಖಾನ್ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss