ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣ: ಆರೋಪಿ ತಂಗಳ್ ಪತ್ತೆಗಾಗಿ ಕರ್ನಾಟಕಕ್ಕೆ ತೆರಳಿವೆ ಸ್ಪೆಷಲ್ ಸ್ಕ್ವಾಡ್

ಹೊಸ ದಿಗಂತ ವರದಿ, ಕಾಸರಗೋಡು:

ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಕಂಪೆನಿಯ ಠೇವಣಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಕಾಸರಗೋಡು ಜಿಲ್ಲೆಯ ಚಂದೇರ ನಿವಾಸಿ ಟಿ.ಕೆ.ಪೂಕೋಯ ತಂಗಳ್ ಗಾಗಿ ಸ್ಪೆಷಲ್ ಸ್ಕ್ವಾಡ್ (ವಿಶೇಷ ತಂಡ) ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಅಲ್ಲದೆ ಈ ವಿಶೇಷ ತಂಡವು ಮುಖ್ಯ ಆರೋಪಿಯನ್ನು ಪತ್ತೆಹಚ್ಚುವ ಸಲುವಾಗಿ ಕರ್ನಾಟಕಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದೆ.
ಕಳೆದ ಎರಡು ವಾರಗಳಿಂದ ತಲೆಮರೆಸಿಕೊಂಡಿರುವ ಪೂಕೋಯ ತಂಗಳ್ ನನ್ನು ಪತ್ತೆಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತಂಡವನ್ನು ರಚಿಸಿದ್ದಾರೆ. ಕಾಸರಗೋಡು, ಚಂದೇರ, ಅಂಬಲತ್ತರ ಮೊದಲಾದ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಈ ತಂಡಕ್ಕೆ ವಿವೇಕ್ ಕುಮಾರ್ ಮೇಲ್ನೋಟ ವಹಿಸಿದ್ದಾರೆ.
ಜ್ಯುವೆಲ್ಲರಿ ಸಂಸ್ಥೆಯ ಮೆನೇಜಿಂಗ್ ಡೈರೆಕ್ಟರ್ ಆಗಿರುವ ಟಿ.ಕೆ.ಪೂಕೋಯ ಅವರು ಠೇವಣಿ ವಂಚನೆ ಪ್ರಕರಣದ ಮುಖ್ಯ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ, ಮುಸ್ಲಿಂಲೀಗ್ ನೇತಾರ ಹಾಗೂ ಸಂಸ್ಥೆಯ ಚೆಯರ್ ಮೆನ್ ಆಗಿರುವ ಎಂ.ಸಿ.ಖಮರುದ್ದೀನ್ ರನ್ನು ಬಂಧಿಸಿದ ಬೆನ್ನಲ್ಲೇ ಪೂಕೋಯ ತಂಗಳ್ ನಾಪತ್ತೆಯಾಗಿದ್ದು , ಆತನ ಮನೆಗೆ ಪೊಲೀಸರು ತೆರಳಿದ್ದರೂ ಪತ್ತೆಹಚ್ಚಲಾಗಿಲ್ಲ. ಪ್ರಥಮ ಆರೋಪಿಯನ್ನು ಪತ್ತೆಹಚ್ಚಲಿರುವ ಪ್ರಯತ್ನದ ಅಂಗವಾಗಿ ಸೈಬರ್ ಸೆಲ್ ನ ಸಹಾಯ ಯಾಚಿಸಿದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಆರೋಪಿಯನ್ನು ಪತ್ತೆಹಚ್ಚಲು ರೂಪಿಸಿದ ಪ್ರತ್ಯೇಕ ತನಿಖಾ ತಂಡವು ಕರ್ನಾಟಕದಲ್ಲಿ ಶೋಧ ನಡೆಸಲು ನಿರ್ಧರಿಸಿದೆ. ಈ ಮಧ್ಯೆ ಟಿ.ಕೆ.ಪೂಕೋಯ ತಂಗಳ್ ನ ಪುತ್ರ ಇಶಾಮ್ ಪ್ರಕರಣದ ಇನ್ನೋರ್ವ ಆರೋಪಿಯಾಗಿದ್ದು , ಆತ ವಿದೇಶಕ್ಕೆ ಪರಾರಿಯಾಗಿರುವ ಬಗ್ಗೆ ಸೂಚನೆಯಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss