Tuesday, August 9, 2022

Latest Posts

ಜ.16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಐಆರ್‌ಬಿ ಕಚೇರಿ ಉದ್ಘಾಟನೆ

ಹೊಸ ದಿಗಂತ ವರದಿ, ವಿಜಯಪುರ:

ತಾಲೂಕಿನ ಅರಕೇರಿ ಗ್ರಾಮದ ಬಳಿ ನಿರ್ಮಿಸಲಾಗಿರುವ ರಾಜ್ಯದ ಎರಡನೇ ಇಂಡಿಯನ್ ರಿಸರ್ವ್ ಬಟಾಲಿಯನ್ (ಐಆರ್‌ಬಿ) ನೂತನ ಆಡಳಿತ ಕಚೇರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜ.16 ರಂದು ವರ್ಚುಯಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ.
ಇಲ್ಲಿನ ನೂರು ಎಕರೆ ಪ್ರದೇಶದಲ್ಲಿ 9.62 ಕೋಟಿ ರೂ.ಗಳ ವೆಚ್ಚದಲ್ಲಿ ಐಆರ್‌ಬಿ ಕಚೇರಿಯನ್ನು ನಿರ್ಮಿಸಲಾಗಿದು, ಐಆರ್‌ಬಿ ಮುಖ್ಯಸ್ಥರು ಸೇರಿದಂತೆ ಕಮಾಂಡರ್, ಇನ್ಸೆಪೆಕ್ಟರ್‌ಗಳಿಗೆ ಪ್ರತ್ಯೇಕ ಹವಾ ನಿಯಂತ್ರಿತ ಕೊಠಡಿಗಳನ್ನು ಈ ಕಚೇರಿ ಹೊಂದಿದೆ.
ಮುನಿರಾಬಾದ್ ಬಿಟ್ಟರೆ ಎರಡನೇ ಐಆರ್‌ಬಿ ಆಡಳಿತ ಕಚೇರಿ ಇದಾಗಿದೆ. ಒಟ್ಟು 730ಕ್ಕೂ ಹೆಚ್ಚು ಸಿಬ್ಬಂದಿ ವಿಜಯಪುರ ವಿಭಾಗದ ಬೆಟಾಲಿಯನ್ ಅಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2010 ರಿಂದ ಇವರ ಕರ್ತವ್ಯ ನಿರ್ವಹಣೆಗೆ ಸ್ವಂತ ಕಟ್ಟಡವಿಲ್ಲದ ಕಾರಣ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಕೇಂದ್ರ, ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿ ಅನುದಾನ ಸಹ ಬಿಡುಗಡೆಗೊಂಡ ಮೇಲೆ 2017ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡು ಸದ್ಯ ಸಿದ್ದವಾಗಿದೆ. ಒಟ್ಟು 451 ಕ್ವಾರ್ಟರ್ಸ್ ಸೇರಿ ಆಡಳಿತ ಕಚೇರಿ ನಿರ್ವಹಣೆ ಸಹ ಮಾಡಿಕೊಡಲು ಅನುವು ಮಾಡಿಕೊಡಲಾಗಿದೆ. ಕಚೇರಿ ಸಿಬ್ಬಂದಿ ಸೇರಿದಂತೆ ಕೇಂದ್ರ ಕಚೇರಿಯಿಂದ ನೇರ ವಿಡಿಯೋ ಸಂವಾದ ನಡೆಸಲು ಆಡಿಟೋರಿಯಂ ಸಹ ಇಲ್ಲಿದೆ. ಸುಮಾರು 250 ಕ್ಕೂ ಹೆಚ್ಚು ಜನ ಕುಳಿತು ಮೇಲಾಧಿಕಾರಿಗಳ ಆದೇಶ, ಸಂದೇಶವನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss