ಹೊಸ ದಿಗಂತ ವರದಿ, ಮೈಸೂರು:
ಸಾಹಿತಿ ಡಾ.ಗುಬ್ಬಿಗೂಡು ರಮೇಶ್ ಸಂಪಾದಿಸಿರುವ ನಾಗಾಭರಣ ಸಿನಿಮಾವರಣ ಪುಸ್ತಕ ಲೋಕಾರ್ಪಣೆ ಜ.23 ರಂದು ಮೈಸೂರಿನಲ್ಲಿ ನಡೆಯಲಿದೆ. ವಿಸ್ಮಯ ಬುಕ್ ಹೌಸ್ ನಗರದ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಅಂದು ಸಂಜೆ 5 ಗಂಟೆಗೆ ಆಯೋಜಿಸಿರುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಜಿ.ಟಿ.ದೇವೇಗೌಡ ನೆರವೇರಿಸಲಿದ್ದು, ಪುಸ್ತಕವನ್ನು ಚಿತ್ರ ನಟ ವಿಜಯ ರಾಘವೇಂದ್ರ ಲೋಕಾರ್ಪಣೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಹೇಮಂತ್ಕುಮಾರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್, ಶಾಸಕ ಎಲ್.ನಾಗೇಂದ್ರ, ಚಿತ್ರನಟರಾದ ಮಂಡ್ಯ ರಮೇಶ್, ಶಿವಧ್ವಜ್, ಗಾಯಕಿ ಸಂಗೀತಾಕಟ್ಟಿ ಕುಲಕರ್ಣಿ, ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಡಾ.ಎನ್.ಕೆ.ಪದ್ಮನಾಭ, ಪ್ರಕಾಶ್ ಚಿಕ್ಕಪಾಳ್ಯ, ಕೃತಿಯ ಲೇಖಕ ಡಾ.ಗುಬ್ಬಿಗೂಡು ರಮೇಶ್ ಮತ್ತಿತರರು ಉಪಸ್ಥಿತರುವರು ಎಂದು ವಿಸ್ಮಯ ಪ್ರಕಾಶನದ ಪ್ರಕಾಶ್ ಚಿಕ್ಕಪಾಳ್ಯ ತಿಳಿಸಿದ್ದಾರೆ.