Friday, July 1, 2022

Latest Posts

ಜ.31ಕ್ಕೆ ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನ

ಹೊಸದಿಲ್ಲಿ: ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನ ಜ.31 ರಿಂದ ಏ.3ರವರೆಗೆ ನಡೆಯಲಿದೆ.

ಸಂಸತ್ ಕಲಾಪಗಳಿಗೆ ಅನುಗುಣವಾಗಿ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ. ಇದು ವರ್ಷದ ಮೊದಲ ಕೇಂದ್ರ ಬಜೆಟ್ ಅಧಿವೇಶನವಾಗಿರಲಿದೆ.

ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನ ಜ.31ಕ್ಕೆ ಆರಂಭವಾಗಿ ಏ.3ಕ್ಕೆ ಮುಗಿಯಲಿದೆ. ಅಧಿವೇಶನದ ಮೊದಲ ಹಂತ ಜ.31 ರಿಂದ ಫೆ.11 ರವರೆಗೆ ನಡೆಯಲಿದೆ. ಮಾ.2 ರಿಂದ ಏ.3 ರವರೆಗೆ ಎರಡನೇ ಹಂತದ ಅಧಿವೇಶನಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಭಯ ಸದನಗಳನ್ನುದ್ದೇಶಿಸಿ ಜ.31 ರಂದು ಜಂಟಿ ಭಾಷಣ ಮಾಡಲಿದ್ದಾರೆ. ಅಂದು ಸಭೆ ಸೇರುವಂತೆ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಸೂಚಿಸಲಾಗಿದೆ. ಈ ಬಾರಿ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕರ ನೋಂದಣಿ ಹಾಗೂ ಜೆ ಎನ್ ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss