ಹೊಸ ದಿಗಂತ ಆನ್ ಲೈನ್ ಡೆಸ್ಕ್ :
ವಿದುಷಿ ಉಷಾ ಈಶ್ವರ ಭಟ್ ಅವರ ಕಾಸರಗೋಡು ವಿದ್ಯಾನಗರ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 24ನೇ ವಾರ್ಷಿಕೋತ್ಸವವುಜ.31ರಂದು ಕಾಸರಗೋಡು ಲಲಿತಕಲಾ ಸದನದಲ್ಲಿ ನಡೆಯಲಿರುವುದು. ಅಂದು ಬೆಳಗ್ಗೆ 9.30ಕ್ಕೆ ಎಡನೀರು ಮಠಾದೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನವನ್ನು ನೀಡಲಿದ್ದಾರೆ.
10ರಿಂದ ಸಂಗೀತ ಶಾಲಾ ವಿದ್ಯಾರ್ಥಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡಲಿದ್ದಾರೆ. ವಿದ್ವಾನ್ ಪ್ರಭಾಕರ ಕುಂಜಾರು, ಡಾ. ಮಾಯಾ ಮಲ್ಯ, ಕೋವೈ ಕಣ್ಣನ್, ರಾಜೀವ್ ಗೋಪಾಲ್ ವೆಳ್ಳಿಕೋತ್, ಟಿ.ಕೆ.ವಾಸುದೇವ ಕಾಞಂಗಾಡು ಹಿಮ್ಮೇಳದಲ್ಲಿ ಜೊತೆಗೂಡಲಿದ್ದಾರೆ. ಅಪರಾಹ್ನ 3ರಿಂದ ಪ್ರಖ್ಯಾತ ಕಲಾವಿದ ವಿದ್ವಾನ್ ವಿಷ್ಣುದೇವ್ ಕೆ.ಎಸ್.ಚೆನೈ ಅವರ ಸಂಗೀತ ಕಛೇರಿ ಜರಗಲಿದೆ. ವಯಲಿನ್ನಲ್ಲಿ ವಿದ್ವಾನ್ ಗೋಕುಲ್ ವಿ.ಎಸ್.ಅಲಂಕೋಡ್, ಮೃದಂಗದಲ್ಲಿ ವಿದ್ವಾನ್ ಬಾಲಕೃಷ್ಣ ಕಾಮತ್ ಕೊಚ್ಚಿ, ಮೋರ್ಸಿಂಗ್ನಲ್ಲಿ ವಿದ್ವಾನ್ ಗೋವಿಂದ ಪ್ರಸಾದ್ ಪಯ್ಯನ್ನೂರು ಸಹಕರಿಸಲಿದ್ದಾರೆ ಎಂದು ಸಂಚಾಲಕ ಬಿ.ಜಿ. ಈಶ್ವರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.