ಮಂಗಳೂರು: ಕೆಲವು ದಿನಗಳ ಹಿಂದೆ ಹೃದಯ ಸಂಬಂಧಿ ಚಿಕಿತ್ಸೆಗೆಂದು ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ತೆರಳಿದ್ದ ಕಂದಮ್ಮ ಈಗ ಗುಣಮುಖವಾಗಿದೆ.
ಫೆ.6ರಂದು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆಗೆಂದು ಮಗುವನ್ನು ಕರೆತರಲಾಗಿತ್ತು. ಫೆ.7 ರಿಂದ 12ರವರೆಗೆ ಚಿಕಿತ್ಸೆ ಪಡೆದುಕೊಂಡ ಮಗು ಆರೋಗ್ಯಯುತವಾಗಿದೆ. ಇಂದು ವೈದ್ಯರು ಮಗುವನ್ನು ಆತ್ಮೀಯವಾಗಿ ಆಸ್ಪತ್ರೆಯಿಂದ ಬೀಳ್ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.