ಚಿಕ್ಕಮಗಳೂರು: ಶಿವಮೊಗ್ಗದಿಂದ ಎರಡು ತಿಂಗಳ ಮಗುವನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ಗೆ ಚಿಕ್ಕಮಗಳೂರಿನ ಪೊಲೀಸರು ಜಿಲ್ಲೆಯ ಗಡಿಭಾಗದವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಕೊಟ್ಟರು.
ಚಿಕ್ಕಮಗಳೂರು, ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ಘಾಟಿ ರಸ್ತೆ ಮುಖಾಂತರ ಆಂಬುಲೆನ್ಸ್ ಮಂಗಳೂರಿಗೆ ತಲುಪಿತು. ಈ ವೇಳೆ ಚಿಕ್ಕಮಗಳೂರಿನಿಂದ ಕೊಟ್ಟಿಗೆಹಾರದ ಜಿಲ್ಲಾ ಗಡಿ ವರೆಗೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು, ಜನರು ರಸ್ತೆ ಬದಿ ನಿಂತು ಆಂಬುಲೆನ್ಸ್ ತೆರಳಲು ಅವಕಾಶ ಮಾಡಿಕೊಟ್ಟರು.
ಶಿವಮೊಗ್ಗದ ಖಾಸಗಿ ಅಸ್ಪತ್ರೆಯಿಂದ ಶಿರಾಳಕೊಪ್ಪ ಮೂಲದ ಸೈಯದ್ ನೊಮನ್(2) ತಲೆಯಲ್ಲಿ ರಕ್ತ ಹೆಪ್ಪು ಗಟ್ಟಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಹೋಗಲು ವೈದ್ಯರು ಸಲಹೆ ಮಾಡಿದ್ದರು. ಶಿವಮೊಗ್ಗದಿಂದ ಬೆಳಗ್ಗೆ 11.43ಕ್ಕೆ ಹೊರಟ ಆಂಬುಲೆನ್ಸ್ ಮಧ್ಯಾಹ್ನ 2.52 ಕ್ಕೆ ಮಂಗಳೂರಿನ ವೆನ್ಲಾಕ್ ಅಸ್ಪತೆ ತಲುಪಿದ್ದು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗದಿಂದ ಹೊರಟ ಆಂಬುಲೆನ್ಸ್ ಚಾಲಕ ಚಿಕ್ಕಮಗಳೂರು ವರೆಗೆ ಟ್ರಾಫಿಕ್ ತೊಂದರೆ ಅನುಭವಿಸಿದ್ದಾನೆ ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಗಡಿಭಾಗಕ್ಕೆ ಬಂದ ಕೂಡಲೇ ಮಗುವಿಗೆ ತುರ್ತು ಚಿಕಿತ್ಸೆಯ ಅಗತ್ಯ ಇರುವುದನ್ನು ಇಲ್ಲಿನ ಪೊಲೀಸರ ಗಮನಕ್ಕೆ ತಂದಿದ್ದಾನೆ. ತಕ್ಷಣ ಪೆÇಲೀಸರು ಜಿಲ್ಲೆಯ ಗಡಿ ಭಾಗದ ವರೆಗೆ ಝೀರೋ ಟ್ರಾಫಿಕ್ ಕಲ್ಪಿಸಿ ಚಿಕ್ಕಮಗಳೂರಿನವರೇ ಅದ ಅಂಬುಲೈನ್ ಚಾಲಕ ಝಿಶಾನ್ ಮನವಿಗೆ ಸ್ಪಂದಿಸಿದ್ದಾರೆ.
ನಮ್ಮ ಮನವಿಗೆ ಸ್ಪಂದಿಸಿ ಚಿಕ್ಕಮಗಳೂರಿನ ಪೆÇಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದರು, ಮಾರ್ಗದುದ್ದಕ್ಕೂ ಜನರು ಸಹಕರಿಸಿದರು ಇದರಿಂದ 3 ಗಂಟೆಯಲ್ಲಿ ಶಿವಮೊಗ್ಗದಿಂದ ಮಂಗಳೂರಿಗೆ ಪ್ರಯಾಣಿಸಲು ಸಾಧ್ಯವಾಯಿತು ಎಂದು ಆಂಬುಲೆನ್ಸ್ ಚಾಲಕ ಝಿಶಾನ್ ತಿಳಿಸಿದರು.