ಇಸ್ತಾಂಬುಲ್: ಟರ್ಕಿ ಕರಾವಳಿ ಪ್ರದೇಶ ಮತ್ತು ಗ್ರೀಕ್ ದ್ವೀಪ್ ಸಾಮೋಸ್ ನಡುವಿನ ಪ್ರದೇಶದಲ್ಲಿ ಉಂಟಾದ ಭೂಕಂಪದಲ್ಲಿ ನಾಲ್ವರು ಮೃತಪಟ್ಟಿದ್ದು, 120ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.
ಟರ್ಕಿಯ ಪಶ್ಚಿಮ ಇಜ್ಮಿರ್ ಪ್ರಾಂತ್ಯದಲ್ಲಿ ಹಲವು ಪ್ರದೇಶಗಳು ಕುಸಿದುಬಿದ್ದಿದೆ. ರಸ್ತೆ ಸಂಪರ್ಕ ಕಡಿತವಾಗಿದೆ. ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ.
ಇಜ್ಮಿರ್ ನಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ. ಒಟ್ಟಾರೆ 120ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿ ಆರೋಗ್ಯ ಸಚಿವ ಟ್ವೀಟ್ ಮಾಡಿದ್ದಾರೆ.
ಇನ್ನು ಟರ್ಕಿಯ ಏಜಿಯಾನ್ ಸಮುದ್ರದ 16.5 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.6 ರಷ್ಟು ತೀವ್ರತೆ ದಾಖಲಾಗಿದೆ.ಈಶಾನ್ಯ ಗ್ರೀಕ್ ದ್ವೀಪದಿಂದ 13 ಕಿಲೋಮೀಟರ್ ದೂರದಲ್ಲಿರುವ ಸಮೋಸ್ನಲ್ಲಿ ಭೂಕಂಪ ಕೇಂದ್ರ ಇತ್ತು ಎಂದು ತಿಳಿದು ಬಂದಿದ್ದು, ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ.