Thursday, August 11, 2022

Latest Posts

ಟಾಲಿವುಡ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಧ್ರುವ ಸರ್ಜಾ ಹೆಜ್ಜೆ ಹಾಕಿರುವ ಖರಾಬು ಹಾಡು, ಯಾವಾಗ ಸಿನಿಮಾ ರಿಲೀಸ್?

ನಂದ ಕಿಶೋರ್  ನಿರ್ದೇಶನದ ಪೊಗರು ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ಆದರೆ ಕೊರೋನಾ  ವೈರೆಸ್  ಲಾಕ್‌ಡೌನ್‌ನಿಂದಾಗಿ  ಬಿಡುಗಡೆಯ ದಿನಾಂಕ  ಮುಂದಕ್ಕೆ  ಹೋಗಿದೆ.  ಈ ಸಿನಿಮಾದ ಹಾಡುಗಳು ಹಾಗೂ ಡೈಲಾಗ್ ಟ್ರೈಲರ್ ಹೊಸ ದಾಖಲೆಗಳನ್ನು ಮಾಡುವ ಮೂಲಕ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಈ ಚಿತ್ರ ಟಾಲಿವುಡ್ನಲ್ಲೂ ರಿಲೀಸ್ ಆಗಲಿದ್ದು, ಈಗ ಖರಾಬು ಹಾಡು ಬಿಡುಗಡೆಗೆ ಸಿದ್ಧವಾಗಿದೆ. ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ, ಡೈಲಾಗ್ ಟ್ರೇಲರ್ ಹಾಗೂ ಹಾಡುಗಳಿಂದಲೇ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದ ಖರಾಬು ಹಾಡು ಸಿನಿಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಕನ್ನಡದಲ್ಲಿ ಈ ಹಾಡು ಬಿಡುಗಡೆಯಾದ ನಂತರ ದಾಖಲೆಗಳ ಮೇಲೆ ದಾಖಲೆ ಮಾಡಿತ್ತು. ಅದರ ಜೊತೆಗೆ ವಿವಾದಕ್ಕೆ ಸಹ ಕಾರಣವಾಗಿತ್ತು. ಈ ಹಾಡಿನಲ್ಲಿ ನಾಯಕಿಗೆ ಸಿಕ್ಕಾಪಟ್ಟೆ ಕಾಟ ಕೊಡಲಾಗಿದ್ದು, ಇದು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತದೆ. ಈ ಕಾರಣದಿಂದ ಹಾಡನ್ನು ಸಿನಿಮಾದಿಂದ ತೆಗೆದಯುವಂತೆ ಕೆಲವು ಮಹಿಳಾ ಸಂಘಟನೆಗಳು ಆಗ್ರಹಿಸಿದ್ದವು. ಜೊತೆಗೆ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿದ್ದರು.ಆದರೂ ಸಿನಿಪ್ರಿಯರಿಗೆ ಈ ಹಾಡು ಸಖತ್ ಇಷ್ಟವಾಗಿತ್ತು. ಈ ಖರಾಬು ಹಾಡು ಈಗ ತೆಲುಗಿನಲ್ಲಿ ರಿಲೀಸ್ ಆಗಲಿದೆ. ಆಗಸ್ಟ್ ೬ರಂದು ಟಾಲಿವುಡ್ನಲ್ಲಿ ಖರಾಬು ಹಾಡು ತನ್ನ ಖದರ್ ತೋರಿಸಲಿದೆ. ಪೊಗರು ಸಿನಿಮಾದಲ್ಲಿ ‘ಧ್ರುವ  ಜೊತೆ ಅಂತರರಾಷ್ಟ್ರೀಯ ಫೈಟರ್‌ಗಳಲ್ಲೂ  ಕೈ ಮಿಲಾಯಿಸಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಧ್ರುವ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಪ್ರಿನ್ಸ್  ಧ್ರುವ ಸರ್ಜಾ ಈ ಸಿನಿಮಾದಲ್ಲಿ ಶಿವನ ಪಾತ್ರದಲ್ಲಿ ನಟಿಸಿದ್ದಾರೆ.ಡಾಲಿ ಧನಂಜಯ್, ತೆಲುಗಿನ ಸ್ಟಾರ್ ನಟ ಜಗಪತಿಬಾಬು, ಆರ್ಮುಗಂ ರವಿಶಂಕರ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss