ದುಬೈ: ಯುಇಎ ನಲ್ಲಿ ನಡೆಯುತ್ತಿರುವ 13 ನೇ ಆವೃತ್ತಿಯ ಐಪಿಎಲ್ 14 ನೇ ಮ್ಯಾಚ್ ನಲ್ಲಿ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಸನ್ರೈಸರ್ಸ್ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಬದಲಾವಣೆ ತಂದುಕೊಂಡಿಲ್ಲ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದೆ. ಮುರಳಿ ವಿಜಯ್, ಋತುರಾಜ್ ಗಾಯಕ್ವಾಡ್ ಮತ್ತು ಜಾಶ್ ಹೇಝಲ್ವುಡ್ ಅವರನ್ನು ಹೊರಗಿಟ್ಟು, ಅಂಬಾಟಿ ರಾಯುಡು, ಶಾರ್ದುಲ್ ಠಾಕೂರ್ ಮತ್ತು ಡ್ವೇನ್ ಬ್ರಾವೋ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರ್ಪಡೆ ಮಾಡಿದೆ.