Saturday, June 25, 2022

Latest Posts

ಟಿಆರ್‌ಪಿ ತಿದ್ದಲು ಅರ್ನಬ್ ಹಣ ನೀಡಿದ್ದರು: ತನಿಖೆ ವೇಳೆ ಬಾರ್ಕ್‌ ಮಾಜಿ ಸಿಇಒ ಸ್ಪೋಟಕ ಮಾಹಿತಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ‘ಟೆಲಿವಿಷನ್ ರೇಟಿಂಗ್ ಪಾಯಿಂಟ್‌’ (ಟಿಆರ್‌ಪಿ) ತಿರುಚಲು ನನಗೆ ಹಣ ನೀಡುತ್ತಿದ್ದರು ಎಂದು ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್’ನ (ಬಾರ್ಕ್‌) ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾ ಪೊಲೀಸ್ ತನಿಖೆಯ ವೇಳೆ ಹೇಳಿಕೆ ನೀಡಿದ್ದಾರೆ.

ಅರ್ನಬ್‌ ಗೋಸ್ವಾಮಿ ಅವರು ತಮ್ಮ ಚಾನೆಲ್’ಗೆ ಅಧಿಕ ಟಿಆರ್‌ಪಿ ನೀಡಲು ದಾಸ್‌ಗುಪ್ತಾಗೆ ಕಾಲಕಾಲಕ್ಕೆ ಲಕ್ಷಗಳ ಮೊತ್ತದಲ್ಲಿ ಹಣ ಮತ್ತು ದುಬಾರಿ ವಾಚ್ ನೀಡಿದ್ದರು ಎಂದು ಪಾರ್ಥೊ ದಾಸ್‌ಗುಪ್ತಾ ಮುಂಬೈ ಪೊಲೀಸ್ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಮುಂಬೈ ಪೊಲೀಸರು ಪಾರ್ಥೊ ದಾಸ್‌ಗುಪ್ತಾ ಅವರ ಮನೆಯಿಂದ ಮೂರು ಕೆಜಿ ಬೆಳ್ಳಿಯನ್ನು ಕೂಡ ವಶಪಡಿಸಿಕೊಂಡಿದ್ದು, ಅರ್ನಬ್ ಗೋಸ್ವಾಮಿ ತಮ್ಮ ಇಂಗ್ಲಿಷ್ ಚಾನೆಲ್ ರಿಪಬ್ಲಿಕ್ ಟಿವಿ ಮತ್ತು ಹಿಂದಿ ಚಾನಲ್ ರಿಪಬ್ಲಿಕ್ ಭಾರತ್‌ಗೆ ಟಿಆರ್‌ಪಿ ನೆರವು ನೀಡಲು ನೀಡಿದ ಹಣದಲ್ಲಿ ಈ ಬೆಳ್ಳಿ ಖರೀದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಆರ್‌ಪಿ ರೇಟಿಂಗ್ ಅಕ್ರಮದಲ್ಲಿ ಅರ್ನಬ್ ಗೋಸ್ವಾಮಿ ಜತೆ ಪಾರ್ಥೊ ದಾಸ್‌ಗುಪ್ತಾ ಶಾಮೀಲಾಗಿರುವುದು ದೃಢಪಟ್ಟಿದ್ದು,  ರಿಪಬ್ಲಿಕ್ ಟಿವಿ ಮತ್ತು ಅದರ ಹಿಂದಿ ಅವತರಣಿಕೆಯ ಟಿಆರ್‌ಪಿ ಅನ್ನು ಪಾರ್ಥೊ ದಾಸ್‌ಗುಪ್ತಾ ತಿರುಚಿದ್ದಾರೆ ಎಂದು ಮುಂಬೈ ಪೊಲೀಸರು  ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss