ಹೊಸ ದಿಗಂತ ವರದಿ ಧಾರವಾಡ:
ಟಿಪ್ಪರ್ ಹಾಗೂ ಮಿನಿ ಬಸ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಘಟನೆ ಇಲ್ಲಿನ ಇಟ್ಟಿಗಟ್ಟಿ ಬಳಿಯ ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಮಿನಿ ಬಸ್ನಲ್ಲಿ 9 ಜನ, ಲಾರಿಯಲ್ಲಿನ ಇಬ್ಬರು ಸೇರಿ ಒಟ್ಟು 11 ಜನರು ಸ್ಥಳದಲ್ಲಿಯೇ ಮೃತಪಟ್ಟು, 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮೃತಪಟ್ಟವರು ದಾವಣಗೇರಿ ಮೂಲದವರೆಂದು ತಿಳಿದು ಬಂದಿದೆ. ಮೃತರ ಹಾಗೂ ಗಾಯಾಳು ಹೆಸರು ಪತ್ತೆ ಮಾಡುವ ಕೆಲಸ ನಡೆದಿದೆ.
ದಾವಣಗೇರಿಯಿಂದ ಗೋವಾಕ್ಕೆ ಟ್ರಿಪ್ ಹೊರಟ್ಟಿದ್ದ ಮಿನಿ ಬಸ್ ಇಟ್ಟಿಗಟ್ಟಿ ಬಳಿಯಲ್ಲಿ ಎದುರಿಗೆ ಬಂದ ಟಿಪ್ಪರ್ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.
ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಸಾವಿನ ಸಂಖ್ಯೆ ಇನ್ನೂ ಏರುವ ಲಕ್ಷಣಗಳು ಗೋಚರಿಸುತ್ತಿವೆ.