Monday, August 8, 2022

Latest Posts

ಟಿಪ್ಪು ವಿಚಾರದಲ್ಲಿ ಇತಿಹಾಸಕಾರರು ಸತ್ಯವನ್ನ ತಿರುಚುವ ಕೆಲಸ ಮಾಡಿದ್ದಾರೆ: ಶಾಸಕ ತನ್ವೀರ್‌ಸೇಠ್

ಹೊಸ ದಿಗಂತ ವರದಿ ಮೈಸೂರು:

ಟಿಪ್ಪು  ವಿಚಾರದಲ್ಲಿ ಇತಿಹಾಸಕಾರರು ಸತ್ಯವನ್ನ ತಿರುಚುವ ಕೆಲಸ ಮಾಡಿದ್ದಾರೆ ಎಂದು ಮೈಸೂರಿನ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಬನ್ನಿ ಮಂಟಪದ ಅಪ್ನಾಗಾರ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಟಿಪುö್ಪ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತಿಹಾಸ ತಿರುಚುವವರಿಗೆ ನಾವು ಗೌರವ ಕೊಡುವ ಅಗತ್ಯ ಇಲ್ಲ ಎಂದರು. ಟಿಪ್ಪು  ಜಯಂತಿ ವಿಚಾರದಲ್ಲಿ ರಾಜಕಾರಣ ಮಾಡಬಾರದು, ನೂರಾರು ವರ್ಷದಿಂದ ಟಿಪುö್ಪ ಅಭಿಮಾನಿಗಳು ಟಿಪ್ಪು ಜಯಂತಿ ಆಚರಿಸಿಕೊಂಡು ಬಂದಿದ್ದಾರೆ. ಆದರೆ ಅವರ ಭಾವನೆಗಳಿಗೆ ನೋವುಂಟು ಮಾಡುವ ಕೆಲಸ ಮಾಡಬಾರದು ಎಂದರು.
ಸರ್ಕಾರ ಜನಪರ ಕೆಲಸ ಮಾಡದೇ ಟಿಪ್ಪು  ಜಯಂತಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ಟಿಪ್ಪು ವಿನ ವಿಚಾರದಲ್ಲಿ ಮುಸಲ್ಮಾನರನ್ನು ದ್ವೇಷ ಮಾಡುವ ಕೆಲಸ ಮಾಡಲಾಗುತ್ತಿದೆ. ನಾವು ಮಾಡುವ ಊಟ, ಬಟ್ಟೆಯಲ್ಲಿ ಟೀಕೆ ಮಾಡ್ತಾರೆ. ನಿಮಗೆ ತಾಕತ್ತಿದ್ದರೆ ಸರಾಯಿ, ಜೂಜಾಟ ನಿಷೇಧ ಮಾಡಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss