Monday, July 4, 2022

Latest Posts

ಟಿ20 ಯಲ್ಲಿ ಕಿವೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಭರ್ಜರಿ ಜಯ

ನ್ಯೂಜಿಲ್ಯಾಂಡ್: ಭಾರತ ಮತ್ತು ನ್ಯೂಜಿಲ್ಯಾಂಡ್ ಟಿ20 ಕ್ರಿಕೆಟ್ ನಲ್ಲಿ ಭಾರತ 6 ವಿಕೆಟ್ ಗಳಿಂದ ಭಾರತ ಕಿವೀಸ್ ವಿರುದ್ಧ ಜಯಭೇರಿ ಭಾರಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆರಿಸಿದ ಭಾರತಕ್ಕೆ ನ್ಯೂಜಿಲ್ಯಾಂಡ್ ಆಟಗಾರ ಕೊಲಿನ್ ಮುನ್ರೋ 59 ರನ್ ಗಳಿಸಿದರೆ, ನಂತರ ಬಂದ ಕ್ಯಾಪ್ಟನ್ ಕನೆ ವಿಲಿಯಮ್ ಸನ್ (51 ರನ್) ಗಳಿಗೆ ಔಟ್ ಆದರು. ಮಾರ್ಟಿನ್ ಗುಪ್ಟಿಲ್ (30 ರನ್) ಪಡೆದು ಪಂದ್ಯದಿಂದ ಹೊರನಡೆದರು.  ರೋಸ್ ಟೇಲರ್ ರ ಭರ್ಜರಿ (54 ರನ್) ಗಳಿಂದ ಒಟ್ಟಾರೆ  20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 204 ರನ್ ಗಳ ಗುರಿ ನೀಡಿದ್ದರು.

 ಭಾರತದಿಂದ ರೋಹಿತ್ ಶರ್ಮ (7 ರನ್) ಗೆ ಪಂದ್ಯದಿಂದ ಹೊರಬಂದರೆ ಕ್ಯಾಪ್ಟನ್ ಕೋಹ್ಲಿ (45ರನ್) ಗಳಿಸಿದರು. ವಿಕೆಟ್ ಕೀಪರ್ ರಾಹುಲ್(56) ಅರ್ಧ ಶತಕ ಭಾರಿಸಿದರು. ಶ್ರೇಯಸ್ ಅಯ್ಯರ್ (ಅಜೇಯ 58) ರನ್ ಮತ್ತು ಮನೀಶ್ ಪಾಂಡೆ(14 ರನ್) ಗಳಿಸಿ ಭಾರತ ಮತ್ತು ನ್ಯೂಜಿಲ್ಯಾಂಡ್ ನ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss