Thursday, July 7, 2022

Latest Posts

ಟಿ20 ಸರಣಿಯಲ್ಲಿ ಶುಭಾರಂಭ ಕಂಡ ಭಾರತ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಶುಭಾರಂಭ ಕಂಡಿದೆ.
ಸ್ಪಿನ್ನರ್ ಚಾಹಲ್, ನಟರಾಜನ್ ಅವರ ಕೈಚಳಕದ ನೆರವಿನಿಂದ ಭಾರತವು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು 11 ರನ್ನುಗಳಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಕನ್ನಡಿಗ ಕೆಎಲ್ ರಾಹುಲ್ 51 ಮತ್ತು ರವೀಂದ್ರ ಜಡೇಜಾ 44*ರನ್ ಗಳ ಉತ್ತಮ ಬ್ಯಾಟಿಂಗ್‌ನಿಂದ 7 ವಿಕೆಟ್‌ಗೆ 161 ರನ್ ಪೇರಿಸಿತು. ಗೆಲ್ಲಲು 162 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಜಡೇಜಾಗೆ ಬ್ಯಾಟಿಂಗ್ ವೇಳೆ ಹೆಲ್ಮೆಟ್‌ಗೆ ಚೆಂಡೇಟು ಬಿದ್ದಿದ್ದರಿಂದ ಐಸಿಸಿಯ ಕನ್‌ಕಷನ್ (ಮೆದುಳು ಇಂಜುರಿ) ನಿಯಮದನ್ವಯ 2ನೇ ಸರದಿಯಲ್ಲಿ ಚಾಹಲ್ ಬದಲಿ ಆಟಗಾರರಾಗಿ ಕಣಕ್ಕಿಳಿದರು. ಇದರ ಭರ್ಜರಿ ಲಾಭವೆತ್ತಿದ ಭಾರತ ತಂಡ ಆಸೀಸ್‌ಗೆ ಕಡಿವಾಣ ಹಾಕುವಲ್ಲಿ ಸಫಲವಾಯಿತು. ಭಾರತದ ಪರ ಚೊಚ್ಚಲ ಟಿ-20 ಪಂದ್ಯ ಆಡಿದ ನಟರಾಜನ್ ಸಹ ಮೂರು ವಿಕೆಟ್ ಪಡೆದು ಗಮನ ಸೆಳೆದರು.
ಆಸ್ಟ್ರೇಲಿಯಾ ಪರ ಫಿಂಚ್ 35, ಶಾರ್ಟ್ 34, ಸ್ಮಿತ್ 12, ಹೆನ್ರಿಕ್ಸ್ 30, ಮ್ಯಾಕ್ಸ್‌ವೆಲ್ 2, ಅಬೋಟ್ 12*, ಸ್ವಿಪ್‌ಸನ್ 12* ರನ್ ಗಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss