Wednesday, June 29, 2022

Latest Posts

ಟೀಂ ಇಂಡಿಯಾಗೆ ಆಘಾತ: ಆಲ್‌ರೌಂಡರ್ ಇಂಗ್ಲೆಂಡ್ ನಡುವಿನ ಟೆಸ್ಟ್’ನಿಂದ ಹೊರಗೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂಗ್ಲೆಂಡ್ ವಿರುದ್ಧದ ಮೊದಲ‌ ಟೆಸ್ಟ್ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಉಳಿದಿರುವಂತೆಯೇ ಟೀಮ್ ಇಂಡಿಯಾದ ಭರವಸೆಯ ಆಲ್ ರೌಂಡರ್ ಅಕ್ಷಯ್ ಪಟೇಲ್ ತಂಡದಿಂದ ಹೊರಗುಳಿದಿದ್ದಾರೆ.

ಅಭ್ಯಾಸ ವೇಳೆ ಅವರ ಎಡಬದಿಯ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿ ಇನ್ನೂ ಬಾರದಿರುವ ಹಿನ್ನೆಲೆಯಲ್ಲಿ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ‌ಎಂದು ಬಿಸಿಸಿಐ ತಿಳಿಸಿದೆ.

ಅಕ್ಷಯ್ ಪಂದ್ಯದಿಂದ ಹೊರಗುಳಿಯುವಂತಾಗಿದ್ದು ಆಘಾತಕಾರಿ ವಿಷಯವಾಗಿದೆ. ಸ್ಪಿನ್ನರ್‌ಗಳಾದ ಶಹಬಾಜ್ ನದೀಮ್ ಮತ್ತು ರಾಹುಲ್ ಚಹರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss