Tuesday, June 28, 2022

Latest Posts

ಟೆರರ್ ಫಂಡಿಂಗ್: ಉಗ್ರ ಹಫೀಜ್ ಸಯೀದ್‌ನ ಸಹಚರರನ್ನು ಜೈಲಿಗಟ್ಟಿದ ಕೋರ್ಟ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಟೆರರ್ ಫಂಡಿಂಗ್ ಪ್ರಕರಣವೊಂದರಲ್ಲಿ ಜಮಾತ್ ಉದ್ ದಾವಾ (ಜೆಯುಡಿ) ಮುಖ್ಯಸ್ಥ ಉಗ್ರ ಹಫೀಜ್ ಸಯೀದ್‌ನ ಇಬ್ಬರು ಸಹಚರರಿಗೆ ಪಾಕಿಸ್ತಾನದ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಜೆಯುಡಿ ನಾಯಕರಾದ ಮುಹಮ್ಮದ್ ಅಶ್ರಫ್ ಮತ್ತು ಲಕ್‌ಮನ್ ಷಾ ಸಜೆಗೊಳಪಟ್ಟವರು. ಲಾಹೋರ್ Anti ಟೆರರಿಸಂ ಕೋರ್ಟ್ ಈ ತೀರ್ಪು ನೀಡಿದೆ.
ನ್ಯಾಯಾಧೀಶರಾದ ಅರ್ಶಾದ್ ಹುಸೇನ್ ಭುಟ್ಟಾ , ಅಶ್ರಫ್‌ಗೆ 6 ವರ್ಷ, ಷಾಗೆ ಐದೂವರೆ ವರ್ಷ ಸಜೆ ನೀಡಿದ್ದಾರೆ. ಅಲ್ಲದೆ, ಇಬ್ಬರಿಗೂ ತಲಾ 10,000 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಗುರುವಾರವಷ್ಟೇ ಹಫೀಜ್ ಸಯೀದ್‌ಗೂ 10 ವರ್ಷ ಸಜೆಯನ್ನು ನ್ಯಾಯಾಲಯ ಪ್ರಕಟಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss