Monday, July 4, 2022

Latest Posts

ಟೆಲಿಕಾಂ ಕ್ಷೇತ್ರದಲ್ಲಿ ಮತ್ತೆ ಸಂಚಲನ: ನಾಳೆಯಿಂದ ಎಲ್ಲಾ ಕಾಲ್ ಫ್ರೀ ಎಂದ Jio!

ಹೊಸದಿಗಂತ ಆನ್ ಲೈನ್ ಡೆಸ್ಕ್:

ರಿಲಯನ್​ ಜಿಯೋ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಇನ್ನು ಇಂಟರ್​ಕನೆಕ್ಟ್ ಯೂಸ್ ಚಾರ್ಜ್ ಅಡಿ 2021ರ ಜನವರಿ 1ರಿಂದ ದೇಶೀಯ ಧ್ವನಿ ಕರೆಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ಗುರುವಾರ ತನ್ನ ನೆಟ್‌ವರ್ಕ್‌ನಿಂದ ಭಾರತದಲ್ಲಿ ಎಲ್ಲಿಯಾದರೂ ಇತರ ನೆಟ್‌ವರ್ಕ್‌ಗಳಿಗೆ ಬರುವ ಎಲ್ಲಾ ಕರೆಗಳು 2021ರ ಜನವರಿ 1ರಿಂದ ಮುಕ್ತವಾಗಲಿವೆ ಎಂದು ಹೇಳಿದ್ದು, ಈ ಮೂಲಕ ಐಯುಸಿ ಯುಗವು ಅಂತ್ಯಗೊಳಿಸಲು ಮುಂದಾಗಿದೆ.
2021ರ ಜನವರಿ 1ರಿಂದ ದೇಶದಲ್ಲಿ ‘ಬಿಲ್ ಅಂಡ್ ಕೀಪ್’ ನಿಯಮ ಜಾರಿಗೆ ತರಲಾಗುತ್ತಿದ್ದು, ಆ ಮೂಲಕ ಎಲ್ಲಾ ದೇಶೀಯ ಧ್ವನಿ ಕರೆಗಳಿಗೆ ಐಯುಸಿ ಶುಲ್ಕವನ್ನು ಕೊನೆಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇನ್ನು ಜಿಯೋ ಮತ್ತೊಮ್ಮೆ ಎಲ್ಲಾ ಆಫ್-ನೆಟ್ ದೇಶೀಯ ಧ್ವನಿ ಕರೆಗಳನ್ನು ಉಚಿತವಾಗಿ ನೀಡುತ್ತಿದ್ದು, ಆನ್-ನೆಟ್ ದೇಶೀಯ ಧ್ವನಿ ಕರೆಗಳು ಜಿಯೋ ನೆಟ್‌ವರ್ಕ್‌ನಲ್ಲಿ ಯಾವಾಗಲೂ ಉಚಿತವಾಗಿದೆ ಎಂದು ಹೇಳಿದೆ.
ಕಳೆದ ಒಂದು ವರ್ಷದಿಂದ ರಿಲಯನ್ಸ್ ಜಿಯೋ ಗ್ರಾಹಕರಿಗೆ ಪ್ರತಿಸ್ಪರ್ಧಿ ಫೋನ್ ನೆಟ್‌ವರ್ಕ್‌ಗಳಿಗೆ ಮಾಡಿದ ಧ್ವನಿ ಕರೆಗಳಿಗಾಗಿ ನಿಮಿಷಕ್ಕೆ 6 ಪೈಸೆ ಶುಲ್ಕ ವಿಧಿಸುತ್ತಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss