Wednesday, June 29, 2022

Latest Posts

ಟೆಲಿಮೆಡಿಸಿನ್ ಉಪಕ್ರಮ ಇ-ಸಂಜೀವನಿ: ಅಲ್ಪಾವಧಿಯಲ್ಲಿಯೇ 5 ಲಕ್ಷ ದೂರ ಸಂಪರ್ಕ ಸಮಾಲೊಚನೆ ದಾಖಲು

ಹೊಸದಿಲ್ಲಿ: ಕೇಂದ್ರ ಆರೋಗ್ಯ ಸಚಿವಾಲಯದ ಟೆಲಿಮೆಡಿಸಿನ್ ಉಪಕ್ರಮ ಇ-ಸಂಜೀವನಿಯು ರೋಗಿಗಳು ಮತ್ತು ವೈದ್ಯರಲ್ಲಿ ಶೀಘ್ರವಾಗಿ ಜನಪ್ರಿಯತೆ ಗಳಿಸುತ್ತಿದೆ. ಇದು ಅಲ್ಪಾವಧಿಯಲ್ಲಿಯೇ 5 ಲಕ್ಷ ದೂರ ಸಂಪರ್ಕ ಸಮಾಲೊಚನೆಗಳನ್ನು ದಾಖಲಿಸಿದೆ. ಕೊನೆಯ ಒಂದು ಲಕ್ಷ ಸಮಾಲೋಚನೆಗಳನ್ನು ದಾಖಲೆಯ 17 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ.
ಆರೋಗ್ಯ ಸೇವೆಗಳ ವಿತರಣೆಯ ಡಿಜಿಟಲ್ ವಿಧಾನವಾಗಿ, ಇ-ಸಂಜೀವನಿ ಕ್ರಮೇಣ ಭಾರತೀಯ ಆರೋಗ್ಯ ಸೇವೆಗೆ ಸಮಾನಾಂತರವಾಗಿ ರೂಪುಗೊಳ್ಳುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಈ ವೇದಿಕೆಯಲ್ಲಿ ದಿನಕ್ಕೆ 8,000 ದೂರಸಂಪರ್ಕ ಕರೆಗಳು ಸ್ವೀಕಾರವಾಗಿವೆ. ಪ್ರಸ್ತುತ 26 ರಾಜ್ಯಗಳು ಇ-ಸಂಜೀವನಿ ಟೆಲಿಮೆಡಿಸಿನ್‌ನ ವೈದ್ಯರಿಂದ ವೈದ್ಯರಿಗಾಗಿ ಇರುವ ಇ-ಸಂಜೀವನಿಎಬಿ – ಎಚ್‌ಡಬ್ಲ್ಯೂಸಿ ಮತ್ತು ರೋಗಿಗೆ ವೈದ್ಯರಿಗೆ ಇರುವ ಇ-ಸಂಜೀವನಿಒಪಿಡಿ ಈ ಎರಡು ರೂಪಾಂತರಗಳನ್ನು ಬಳಸುತ್ತಿವೆ.
ವಿಶ್ವದ ಅತಿದೊಡ್ಡ ಟೆಲಿಮೆಡಿಸಿನ್ ಪ್ಲಾಟ್‌ಫಾರ್ಮ್ ಆಗುವ ಸಾಮರ್ಥ್ಯವನ್ನು ಹೊಂದಿರುವ ಇ-ಸಂಜೀವನಿಒಪಿಡಿ ಅನ್ನು ಕಳೆದ ಏಪ್ರಿಲ್ 13ರಂದು ಮೊದಲ ಲಾಕ್‌ಡೌನ್ ಸಮಯದಲ್ಲಿ ದೇಶಾದ್ಯಂತ ಒಪಿಡಿಗಳು ಮುಚ್ಚಿದಾಗ ಆರಂಭ ಮಾಡಲಾಯಿತು. ಈವರೆಗೆ ದೇಶಾದ್ಯಂತ 5,00,091 ದೂರ ಸಂಪರ್ಕ ಸಮಾಲೋಚನೆಗಳನ್ನು ನಡೆಸಲಾಗಿದೆ.
ಇ-ಸಂಜೀವನಿ ಮತ್ತು ಇ-ಸಂಜೀವನಿಒಪಿಡಿ ಪ್ಲಾಟ್‌ಫಾರ್ಮ್‌ಗಳ ಮೂಲಕ ಅತಿ ಹೆಚ್ಚು ಸಮಾಲೋಚನೆ ನಡೆಸಿದ ಮೊದಲ ಹತ್ತು ರಾಜ್ಯಗಳು ತಮಿಳುನಾಡು (169977), ಉತ್ತರ ಪ್ರದೇಶ (134992), ಹಿಮಾಚಲ ಪ್ರದೇಶ (39326), ಕೇರಳ (39300), ಆಂಧ್ರಪ್ರದೇಶ (31365), ಉತ್ತರಾಖಂಡ (16442) ಪ್ರದೇಶ (14965), ಗುಜರಾತ್ (10839), ಕರ್ನಾಟಕ (9498), ಮಹಾರಾಷ್ಟ್ರ (7895) ಆಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss