ಟೆಸ್ಟ್ ranking : ಭಾರತದ ಅಗ್ರಸ್ಥಾನ ಕಳಚಿತು!

0
109

ಟೆಸ್ಟ್ ರ್‍ಯಾಂಕಿಂಗಿನಲ್ಲಿ ಭಾರತದ ಅಗ್ರ ಸ್ಥಾನ ಕಳಚಿದೆ. ಇದೀಗ ಆಸ್ಟ್ರೇಲಿಯಾವು ಭಾರತದ ಸ್ಥಾನವನ್ನು ಅಲಂಕರಿಸಿದೆ.
ಐಸಿಸಿ ಹೊರಡಿಸಿರುವ ಹೊಸ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತವು ಮೂರನ ಸ್ಥಾನಕ್ಕೆ ಕುಸಿದಿದೆ. ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ.
ಭಾರತವು 2016ರ ಅಕ್ಟೋಬರ್‌ನಿಂದ ಟೆಸ್ಟ್ ರ್‍ಯಾಂಕಿಂಗಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದಿತ್ತಾದರೂ ಈಗ  ಅಲ್ಲಿಂದ ಕೆಳಗಿಳಿದಿದೆ.  ಆಸ್ಟ್ರೇಲಿಯಾ ಟೆಸ್ಟ್ ಮಾತ್ರವಲ್ಲದೆ ಟಿ20 ರ್‍ಯಾಂಕಿಂಗಿನಲ್ಲಿ ಕೂಡ ಒಂದನೇ ಸ್ಥಾನ ಪಡೆದಿದೆ. ಈವರೆಗೆ ಒಂದನೇ ಸ್ಥಾನದಲ್ಲಿದ್ದ ಪಾಕಿಸ್ಥಾನದ ಸ್ಥಾನ ಕುಸಿದಿದೆ.
ಟೆಸ್ಟ್ ರ್‍ಯಾಂಕಿಂಗಿನಲ್ಲಿ ಭಾರತದ ಸ್ಥಾನವು ಕುಸಿಯಲು ಕಾರಣವೇನೆಂದರೆ ಐಸಿಸಿ ಈ ಬಾರಿ 2017-18ರ ನಂತರದ ಸರಣಿಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡುದು. ನಿಜವಾಗಿ 2016-17 ಲ್ಲಿ ಭಾರತವು 12 ಟೆಸ್ಟ್ ಗೆದ್ದು ಕೇವಲ ಒಂದು ಸೋತಿತ್ತು. ಆದರೆ ಅದು ಗಣನೆಗೆ ಬಾರದ್ದರಿಂದ ಭಾರತಕ್ಕೆ ಅಂಕಗಳಿಕೆಯಲ್ಲಿ ಹಿನ್ನಡೆಯಾಯಿತು.

LEAVE A REPLY

Please enter your comment!
Please enter your name here