Thursday, July 7, 2022

Latest Posts

ಟೊಮ್ಯಾಟೋ ಬಾಕ್ಸ್ ನಲ್ಲಿ ಸ್ಫೋಟಕ ಸಾಗಾಟ: ವಾಳಯಾರ್ ಗಡಿಯಲ್ಲಿ ಇಬ್ಬರು ಬಲೆಗೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ತಮಿಳುನಾಡು-ಕೇರಳ ಗಡಿ ಭಾಗದಲ್ಲಿ ಪೊಲೀಸರು ಇಂದು ಮುಂಜಾನೆ ಲಾರಿಯಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಟೊಮ್ಯಾಟೋ ಬಾಕ್ಸ್ ಎಂಬುದಾಗಿ ತಿಳಿಸಿ, ಪೊಲೀಸರ ಕಣ್ ತಪ್ಪಿಸಿ, ಮೇಲೆ ಟೊಮ್ಯಾಟೋ, ಅದರ ಕೆಳಗೆ ಜಿಲೆಟಿನ್, ಡಿಟೋನೇಟರ್ ಗಳನ್ನು ಸಾಗಿಸುತ್ತಿದ್ದವರನ್ನು ಕೇರಳ ಪೊಲೀಸರು ಪತ್ತೆಹಚ್ಚಿದ್ದು , ಈ ಸಂಬಂಧ ಟೆಂಪೋ ಚಾಲಕ ಪ್ರಭು ಹಾಗೂ ಮತ್ತೊಬ್ಬನನ್ನು ಬಂಧಿಸಿದ್ದಾರೆ.
ಕೊಯಮತ್ತೂರಿನಿಂದ ಕೇರಳಕ್ಕೆ ಟೆಂಪೋ ಒಂದರಲ್ಲಿ 30 ಬಾಕ್ಸ್ ಟೊಮ್ಯಾಟೋ ಸಾಗಿಸಲಾಗುತ್ತಿತ್ತು. ಇಂತಹ ಟೊಮ್ಯಾಟೋ ಸಾಗಿಸುತ್ತಿದ್ದಂತ ಟೆಂಪೋದಲ್ಲಿಯೇ ಸ್ಫೋಟಕ ಕೂಡ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ ತಮಿಳುನಾಡು ಹಾಗೂ ಕೇಳರ ಗಡಿಭಾಗ ವಾಳಯಾರ್ ಚೆಕ್ ಪೋಸ್ಟ್ ಬಳಿಯಲ್ಲಿ ಪೊಲೀಸರು ತಪಾಸಣೆ ಕಾರ್ಯವನ್ನು ಹೆಚ್ಚಿಸಿದ್ದರು.
ಈ ವೇಳೆ ಟೊಮ್ಯಾಟೋ ಬಾಕ್ಸ್ ಒಳಗೆ ಹುದುಗಿಸಿಟ್ಟಿದ್ದಂತ 7000 ಜಿಲೆಟಿನ್ ಸ್ಟಿಕ್ ಗಳು ಹಾಗೂ 7500 ಡಿಟೋನೇಟರ್ ಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss