Tuesday, June 28, 2022

Latest Posts

ಟೋಕಿಯೋ ಒಲಂಪಿಕ್ಸ್: ಮಣಿಪುರದ ಚಾನು ಭಾರ ಎತ್ತಿದ ಬಗೆ ಇಲ್ಲಿದೆ ನೋಡಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮೀರಾಬಾಯಿ ಚಾನು ಭಾರತದಕ್ಕೆ ಟೋಕಿಯೋ ಒಲಂಪಿಕ್ಸ್ ನಲ್ಲಿ ಮೊದಲ ಪದಕ ಗಳಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವೇಟ್ ಲಿಫ್ಟಿಂಗ್ ನ ಕ್ಲೀನ್ ಮತ್ತು ಜರ್ಕ್ ನ ಮೊದಲ ಪ್ರಯತ್ನದಲ್ಲಿ 110 ಕೆ.ಜಿ. ತೂಕ ಎತ್ತಿ ಎರಡನೇ ರೌಂಡ್ ಗೆ ಆಯ್ಕೆಯಾಗುತ್ತಾರೆ. ಎರಡನೇ ಸಲ 115 ಕೆ.ಜಿ. ತೂಕ ಎತ್ತುವ ಮೂಲಕ ಫೈನಲ್ಸ್ ಗೆ ಆಯ್ಕೆಯಾದ ಮೀರಾಬಾರಿ. ಫೈನಲ್ಸ್ ನಲ್ಲಿ 117 ಕೆ.ಜಿ. ಭಾರ ಎತ್ತುವ ಮೂಲಕ ಭಾರಕ್ಕೆ ಬೆಳ್ಳಿಪದಕ ಗಳಿಸಿದ್ದಾರೆ.

ಭಾರತಕ್ಕೆ ಪದಕ ಗಳಿಸಿದ ಮೀರಾಬಾಯಿ ಚಾನುಗೆ ಪ್ರಧಾನಿ ಸೇರಿದಂತೆ ಗಣ್ಯರು ಮತ್ತು ಶ್ರೀಸಾಮಾನ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಪ್ರಧಾನಿ ಮೋದಿ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದು, ಟೋಕಿಯೋ 2020 ಆರಂಭಕ್ಕೆ ಇದಕ್ಕಿಂತ ಬೇರೆ ಸಂತೋಷದ ಆರಂಭವನ್ನು ಅಪೇಕ್ಷಿಸಲಾರೆ. ಮೀರಾಬಾರಿ ಚಾನು ಅವರ ಅದ್ಭುತ ಪ್ರದರ್ಶನದಿಂದ ಭಾರತ ಸಂತೋಷಗೊಂಡಿದೆ. ಅವರ ಯಶಸ್ಸು ಪ್ರತಿಯೊಬ್ಬ ಭಾರತೀಯನನ್ನು ಪ್ರೇರೇಪಿಸಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss