Saturday, August 13, 2022

Latest Posts

ಟ್ಯಾಂಕರ್ ಲಾರಿಗೆ ಓಮಿನಿ ವ್ಯಾನ್ ಡಿಕ್ಕಿ: ಮೂವರ ದಾರುಣ ಸಾವು

ಹೊಸ ದಿಗಂತ ವರದಿ , ಚಿತ್ರದುರ್ಗ:

ಟ್ಯಾಂಕರ್ ಲಾರಿಗೆ ಮಾರುತಿ ಓಮಿನಿ ವ್ಯಾನು ಡಿಕ್ಕಿಯಾದ ಪರಿಣಾಮ ಮೂರು ಜನ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ. ಮೃತರನ್ನು ಬೆಂಗಳೂರಿನ ಕೆಂಗೇರಿಯ ನಿವಾಸಿಗಳಾದ ರೇಣುಕಮ್ಮ (68), ಶಿವರಾಜ್ (45) ಹಾಗೂ ಶಂಕರ್ (39) ಎಂದು ಗುರುತಿಸಲಾಗಿದೆ.
ಕಾರ್ಯ ನಿಮಿತ್ತ ದಾವಣಗೆರೆಗೆ ಹೋಗಿದ್ದ ಇವರು ಓಮಿನಿ ವ್ಯಾನ್‌ನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು. ನಗರದ ಹೊರವಲಯದ ಕ್ಯಾದಿಗೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಹಿಂದುಗಡೆಯಿಂದ ಓಮಿನಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವಘಡ ನಡೆದಿದೆ.
ಘಟನೆಯಲ್ಲಿ ಓಮಿನಿ ವಾಹನದಲ್ಲಿದ್ದ ರೇಣುಕಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಶಂಕರ್ ಹಾಗೂ ಶಿವರಾಜ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಜಯಶ್ರೀ (25), ಇವರ ಮಕ್ಕಳಾದ ಮೌನಿಕಾ (7), ಶೋಭಿತಾ (5) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss