ಟ್ಯಾಂಕರ್-ಲಾರಿ ಅಪಘಾತ: ಟ್ಯಾಂಕರ್ ಚಾಲಕನಿಗೆ ಗಂಭೀರ ಗಾಯ

0
59

ಧಾರವಾಡ: ರಸ್ತೆಯ ಬದಿಯಲ್ಲಿ ನಿಂತಿರುವ ಲಾರಿಯೊಂದಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಚಾಲಕ ಗಂಭೀರ ಗಾಯಗೊಂಡ ಘಟನೆ ನವಲಗುಂದ ತಾಲೂಕಿನ ಹೆಬಸೂರ ಬಳಿಯಲ್ಲಿ ಭಾನುವಾರ ಸಂಭವಿಸಿದೆ.
ಗಾಯಗೊಂಡ ವ್ಯಕ್ತಿಯನ್ನು ಮಹಾರಾಷ್ಟç ಮೂಲದ ಖುಶಿದ್(32) ಎಂದು ಗುರುತಿಸಿದೆ. ಉಭಯ ವಾಹನಗಳು ಮಹಾರಾಷ್ಟ ರಾಜ್ಯಕ್ಕೆ ತೆರಳುತ್ತಿದ್ದು, ಲಾರಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ನಿಂತ ಲಾರಿಗೆ ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಚಾಲಕ ನಿದ್ರೆ ಮಂಪರಿನಲ್ಲಿ ವಾಹನ ನಿಯಂತ್ರಣಕ್ಕೆ ಬಾರದೆ ಹಿಂದಿನಿ0ದ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ.
ಟ್ಯಾಂಕರ್ ಗುದ್ದಿರುವ ರಭಸಕ್ಕೆ ಘಟನೆಯಲ್ಲಿ ಟ್ಯಾಂಕರ್ ಚಾಲಕ ಖುಶಿದ್ ಮುಖ, ಹಾಗೂ ತಲೆ ಜಜ್ಜಿದ ರೀತಿಯಲ್ಲಿ ಗಂಭೀರ ಗಾಯಗಳಾಗಿವೆ. ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ರವಾನಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here