Friday, July 1, 2022

Latest Posts

ಟ್ರಂಪ್ ಭಾರತ ಭೇಟಿ ಪಾಕಿಸ್ಥಾನಕ್ಕೆ ಎಚ್ಚರಿಕೆ: ಶೋಭಾ ಕರಂದ್ಲಾಜೆ 

ಉಡುಪಿ: ಟ್ರಂಪ್ ಅವರ ಭಾರತ ಭೇಟಿ ಮೂಲಕ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಬಲವಾದ ಎಚ್ಚರಿಕೆಯಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ದೇಶ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತದೆ, ಭಯೋತ್ಪಾದಕರಿಗೆ ನೆರವು ನೀಡುತ್ತದೆ ಎಂಬ ಸಂಶಯ ಬಹಳ ಕಾಲದಿಂದ ಇತ್ತು. ಆದರೆ ಟ್ರಂಪ್ ಅವರು ಭಾರತಕ್ಕೆ ಬಂದು ಭಯೋತ್ಪಾದನೆಯ ವಿರುದ್ಧ ಮಾತನಾಡಿ, ಭಾರತದ ಸಂಶಯ ಮತ್ತು ಆತಂಕವನ್ನು ದೂರ ಮಾಡಿದ್ದಾರೆ ಎಂದರು.

ಟ್ರಂಪ್ ಅಮೆರಿಕದ ಶಕ್ತಿಶಾಲಿ ಅಧ್ಯಕ್ಷ, ಮೋದಿ ಭಾರತದ ಶಕ್ತಿಶಾಲಿ ಪ್ರಧಾನಿ. ಇಬ್ಬರೂ ಶಕ್ತಿಶಾಲಿ ನಾಯಕರು ಸೇರಿ ಭಾರತದ ನೆಲದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂದ ಶೋಭಾ, ನಮಗೆ ಬೇಕಾಗಿರುವುದು ಎರಡೂ ದೇಶಗಳ ಸ್ನೇಹ ಗಟ್ಟಿಗೊಳ್ಳಬೇಕು. ಆ ವಾತಾವರಣ ಅಮೇರಿಕ ಮತ್ತು ಭಾರತದ ನಡುವೆ ಮೂಡಿದೆ ಎಂದು ಹೇಳಿದರು. ಮೋದಿ ಮತ್ತು ಟ್ರಂಪ್ ಅವರನ್ನು ಸಹಿಸಲಾಗದವರು ಎರಡೂ ದೇಶಗಳಲ್ಲಿದ್ದಾರೆ. ಟ್ರಂಪ್ ಭಾರತ ಭೇಟಿಯ ಬಗ್ಗೆ ಖರ್ಗೆ, ಸಿದ್ದರಾಮಯ್ಯ ಅವರು ಹಗುರವಾಗಿ ಮಾತನಾಡುತ್ತಿದ್ದಾರೆ. ಮೋದಿಯಾಗಲಿ ಟ್ರಂಪ್ ಆಗಲಿ ಸಿದ್ದರಾಮಯ್ಯ ಅವರಿಂದ ಪಾಠ ಕಲಿಯುವ ಅಗತ್ಯವಿಲ್ಲ. ಈ ದೇಶದಲ್ಲಿ ಕಾಂಗ್ರೆಸ್ ಮಾತನ್ನು ಯಾರೂ ಕೇಳುವುದಿಲ್ಲ ಎಂದು ಶೋಭಾ ಟೀಕಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss