Monday, August 8, 2022

Latest Posts

ಟ್ರಂಪ್ ಸಾಹೇಬರಿಗೆ ಸಖತ್ ಶಾಕ್ ನೀಡಿದ್ದ ಟ್ವಿಟರ್‌ಗೆ ಬೆಂಬಲಿಗರ ಚಾಟಿ!!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಖಾತೆ ರದ್ದು ಮಾಡಿ ಟ್ರಂಪ್ ಸಾಹೇಬರಿಗೆ ಸಖತ್ ಶಾಕ್ ನೀಡಿದ್ದ ಟ್ವಿಟರ್‌ಗೆ ಈಗ ಟ್ರಂಪ್ ಬೆಂಬಲಿಗರು ಚುರುಕ್ ಮುಟ್ಟಿಸ್ತಿದ್ದಾರೆ!
ವಾಕ್ ಸ್ವಾತಂತ್ರ್ಯಕ್ಕೆ  ಧಕ್ಕೆ ತಂದಿದೆ ಎಂಬ ಕಾರಣ ನೀಡಿ ಜಾಗತಿಕವಾಗಿ ಟ್ವಿಟರ್ ಹಿಂಬಾಲಕರಲ್ಲಿ ಮೊದಲ ನದಲ್ಲಿದ್ದ ಟ್ರಂಪ್‌ನ ಬೆಂಬಲಿಗರು ಒಬ್ಬೊಬ್ಬರಾಗಿಯೇ ಟ್ವಿಟರ್‌ಗೆ ಗುಡ್ ಬೈ ಹೇಳುತ್ತಿದ್ದಾರೆ. ಈ ಹೊಸ ಬೆಳವಣಿಗೆ ಟ್ವಿಟರ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈಗ ಎಲ್ಲೆಡೆ ‘ಗುಡ್ ಬಾಯ್ ಟ್ವಿಟರ್’ ಸಂದೇಶ ಪಾರ್ಲರ್ ಎಂಬ ಮೈಕ್ರೊ ಬ್ಲಾಗಿಂಗ್ ಆಯಪ್‌ನಲ್ಲಿ ಹರಿದಾಡುತ್ತಿದೆ. ಇತ್ತೀಚೆಗಷ್ಟೇ ವಾಟ್ಸ್ ಆಪ್ ತನ್ನ ಹೊಸ ಶರತ್ತುಗಳಿಂದಾಗಿ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿರುವ ನಡುವೆಯೇ ಈಗ ಟ್ವಿಟರ್‌ಗೂ ಇದೇ ಅನುಭವ ಉಂಟಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss