ವಾಷಿಂಗ್ಟನ್: ನಾನೇನಾದರೂ ಈ ದೇಶದ ಅಧ್ಯಕ್ಷನಾಗದೇ ಇದ್ದಿದ್ದರೆ ನೀವೆಲ್ಲರೂ (ಅಮೆರಿಕನ್ನರು) ಕೊರಿಯಾ ಜೊತೆ ಯುದ್ಧ ಮಾಡಲೇಬೇಕಿತ್ತು .. !!
ಶ್ವೇತಭವನದಲ್ಲಿ ಸುದ್ದಿಗಾರರ ಮುಂದೆ ಡೊನಾಲ್ಡ್ ಟ್ರಂಪ್ ಹೀಗೊಂದು ಮಾತಿನ ಬಾಂಬ್ ಸಿಡಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಅವರ ಆರೋಗ್ಯದ ಬಗ್ಗೆ ತಮಗೆ ಖಚಿತ ಮಾಹಿತಿ ಇದೆ. ಆದರೆ ಈ ಮಾಹಿತಿಯನ್ನು ಯಾರಿಗೂ ಹೇಳಲಿಚ್ಛಿಸುವುದಿಲ್ಲ ಎಂದರು.
ಇಂದಿನ ಸನ್ನಿವೇಶದಲ್ಲಿ ತಾವೇನಾದರೂ ಅಮೆರಿಕ ಅಧ್ಯಕ್ಷ ಗದ್ದುಗೆ ಏರದೇ ಇದ್ದಿದ್ದರೆ, ಖಂಡಿತವಾಗಿಯೂ ಎರಡು ದೇಶಗಳ ನಡುವೆ ಯುದ್ಧವಂತೂ ಆಗುತ್ತಿತ್ತು. ಕಿಮ್ ಜಾಂಗ್ಗೂ ಬೇಕಿರುವುದು ಅದೇ ಎಂದು ಟ್ರಂಪ್ ಹೇಳಿದ್ದಾರೆ. ಕಿಮ್ ಬಗ್ಗೆ ನಾನೇನೂ ಈಗ ಹೇಳುವುದಿಲ್ಲ. ಅದು ನಿಮಗೆ (ಮಾಧ್ಯಮಕ್ಕೆ) ಸದ್ಯವೇ ಗೊತ್ತಾಗಲಿದೆ ಎಂದು ಸೂಚ್ಯವಾಗಿ ಹೇಳಿದರು.