Tuesday, June 28, 2022

Latest Posts

ಟ್ರಾವೆಲ್ ಮಾಡುವಾಗ ವಾಂತಿ ಬಂದಂತಾದರೆ ಏನು ಮಾಡಬೇಕು? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ..

ಕೆಲವೊಮ್ಮೆ ಏನಾದರೂ ತಿಂದರೆ ಅಥವಾ ವಾಸನೆ ನೋಡಿದರೂ ವಾಂತಿ ಬಂದಂತೆ ಆಗುತ್ತದೆ. ವಾಂತಿ ಬಾರದೇ ಇದ್ದರೂ ಬಂದಂತೆ ಆಗುತ್ತದೆ. ಆ ಸಂದರ್ಭದಲ್ಲಿ ನಮ್ಮನ್ನು ನಾವು ಸಂಭಾಳಿಸಿಕೊಳ್ಳಬಹುದು.. ಹೇಗೆ ಅಂತೀರಾ? ಈ ಟಿಪ್ಸ್ ಫಾಲೋ ಮಾಡಿ..

  • ಗಾಳಿಗೆ ಮುಖಒಡ್ಡಿ: ನೀವು ಟ್ರಾವೆಲ್ ಮಾಡುತ್ತಾ ವಾಂತಿ ಬಂದಂತಾದರೆ ಕಿಟಕಿ ತೆಗೆಯಿರಿ. ಫ್ರೆಶ್ ಗಾಳಿಗೆ ಮುಖ ಒಡ್ಡಿ. ಇದರಿಂದ ವಾಂತಿ ಬರುವಂತೆ ಆಗುವುದು ನಿಲ್ಲುತ್ತದೆ. ಆರಾಮಾಗಿ ನೀವು ಟ್ರಾವೆಲ್ ಮಾಡಬಹುದು.
  • ಡಿಸ್ಟ್ರಾಕ್ಟ್ ಮಾಡಿ: ನಿಮ್ಮನ್ನು ನೀವು ಡಿಸ್ಟ್ರಾಕ್ಟ್ ಮಾಡಿಕೊಳ್ಳಿ. ಆ ಕಡೆ ಗಮನ ಹರಿಸುವುದು ನಿಲ್ಲಿಸಿ. ಉದಾಹರಣೆಗೆ ಯಾವುದಾದರೂ ಇಂಟರೆಸ್ಟಿಂಗ್ ವಿಷಯದ ಬಗ್ಗೆ ಮಾತನಾಡಿ. ಅಥವಾ ಸಿನಿಮಾ ನೋಡಿ ಇಲ್ಲವೇ ಹಾಡು ಕೇಳಿ. ಒಟ್ಟಾರೆ ಮೂಡ್ ಚೇಂಕ್ ಆಗಲಿ.
  • ಫಿಜ್ ಡ್ರಿಂಕ್ಸ್: ತಣ್ಣಗಿನ ನೀರು ಅಥವಾ ಫಿಜ್ ಡ್ರಿಂಕ್ಸ್‌ಗಳನ್ನು ಕುಡಿಯಿರಿ. ಇದರಿಂದಲೂ ವಾಮಿಟ್ ಸೆನ್ಸೇಶನ್ ಕಡಿಮೆಯಾಗುತ್ತದೆ.ಕಾರ್ಬೋನೇಟೆಡ್ ಡ್ರಿಂಕ್‌ಗಳು ವಾಂತಿ ಬರದಂತೆ ತಡೆಗಟ್ಟುತ್ತದೆ.
  • ಶುಂಠಿ ಟೀ: ವಾಂತಿ ಬರುವಂತಾದರೆ ಅಥವಾ ಏನು ತಿಂದರೂ ವಾಂತಿ ಬರುವಂತೆ ಆಗುತ್ತಿದ್ದರೆ ಶುಂಠಿ ಹಾಗೂ ಪುದೀನ ಟೀ ಕುಡಿಯಿರಿ. ನೀರಿಗೆ ಪುದೀನ ಹಾಕಿ ಕುದಿಸಿ ನಂತರ ಬೆಲ್ಲ ಹಾಕಿ ಕುಡಿಯಿರಿ.ಶುಂಠಿ ಟೀ ಕೂಡ ಅದೇ ರೀತಿ ಮಾಡಿ.
  • ಚಿಕ್ಕ ತುತ್ತುಗಳಲ್ಲಿ ಊಟ ಮಾಡಿ: ಗಬಗಬ ತಿನ್ನುವ ಅಭ್ಯಾಸ ಇದ್ದರೆ ಮೊದಲು ನಿಲ್ಲಿಸಿ. ಇದು ಆರೋಗ್ಯಕ್ಕೂ ಒಳ್ಳೆಯದಲ್ಲ. ಚಿಕ್ಕ ತುತ್ತು ಮಾಡಿಕೊಂಡು ತಿನ್ನುವುದರಿಂದ ನೀವು ತಿನ್ನುವ ಆಹಾರದ ಸ್ವಾದವೂ ಸಿಗುತ್ತದೆ. ಹಾಗೇ ವಾಂತಿ ಬರುವಂತೆ ಕೂಡ ಆಗುವುದಿಲ್ಲ.

 

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss