ಹೊಸದಿಗಂತ ಆನ್ ಲೈನ್ ಡೆಸ್ಕ್:
ಟೈಮ್ ಮ್ಯಾಗಜೀನ್ನ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾಗ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್ಬರ್ಗ್ (17)ರನ್ನು ಹಂಗಿಸಿದ್ದ ಡೊನಾಲ್ಡ್ ಟ್ರಂಪ್ ಗೆ ಇದೀಗ ಆಕೆ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿ “ಚಿಲ್ ಡೊನಾಲ್ಡ್ ಚಿಲ್” ಎಂದು ಕುಟುಕಿದ್ದಾರೆ!
ಮತದಾನದಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿ “ಸ್ಟಾಪ್ ದಿ ಕೌಂಟ್” ಎಂದು ಮತ ಎಣಿಕೆ ನಿಲ್ಲಿಸಲು ಹೇಳಿ ಟ್ರಂಪ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗ್ರೆಟಾ ತನ್ಬರ್ಗ್, ಡೊನಾಲ್ಡ್ ಟ್ರಂಪ್ ಅವರು ತಮ್ಮ ಆಕ್ರೋಶವನ್ನು ಹದ್ದು ಬಸ್ತಿನಲ್ಲಿಡಲು ಯತ್ನಿಸಬೇಕು ಹಾಗೂ ನಂತರ ಸ್ನೇಹಿತರೊಬ್ಬರೊಂದಿಗೆ ಓಲ್ಡ್ ಫ್ಯಾಶನ್ಸ್ ಸಿನೆಮಾ ನೋಡಲು ತೆರಳಬೇಕು. ಚಿಲ್, ಡೊನಾಲ್ಡ್ ಚಿಲ್ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಟೈಮ್ ಮ್ಯಾಗಜೀನ್ನ ವರ್ಷದ ವ್ಯಕ್ತಿಯಾಗಿ ಟ್ರಂಪ್ ಆಯ್ಕೆಯಾದಾಗ ಗ್ರೆಟಾ ಕುರಿತು ಇದೇ ರೀತಿಯಾಗಿ ಟ್ರಂಪ್ ಟ್ವೀಟ್ ಮಾಡಿದ್ದು ಇದೀಗ ಇದಕ್ಕೆ ಗ್ರೆಟಾ ತಿರುಗೇಟು ನೀಡಿ ಮಾಡಿರುವ ಈ ಟ್ವೀಟ್ ಅನ್ನು 10 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.