Monday, July 4, 2022

Latest Posts

ಪೋಸ್ಟ್ ನನ್ನದಲ್ಲ: ದೇಶದ ಆರ್ಥಿಕತೆ ಕುರಿತ ಪೋಸ್ಟ್ ಗೆ ಖುದ್ದು ಟಾಟ ಸ್ಪಷ್ಟನೆ

ಹೊಸದಿಲ್ಲಿ: ಕೆಲವು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ರತನ್ ಟಾಟ ನೀಡಿದ ಹೇಳಿಕೆ ಎಂಬ ಪೋಸ್ಟ್ ಎಲ್ಲಾ ಕಡೆ ಹರಿದಾಡುತ್ತಿದ್ದು, ಈ ಕುರಿತು ಸ್ವತಃ ರತನ್ ಟಾಟ ಅವರೇ ಪ್ರತಿಕ್ರಿಯಿಸಿದ್ದಾರೆ.

ಭಾರತದ ಆರ್ಥಿಕತೆ ಕುರಿತಾಗಿ ನೀಡಿರುವ ಹೇಳಿಕೆಯ ಪೋಸ್ಟ್ ಸುಳ್ಳು ಎಂದು ರತನ್ ಟಾಟ ತಿಳಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಟ್ವಿಟರ್ ನಿಂದ ಟ್ವೀಟ್ ಮಾಡಿದ ಅವರು, ನಾನು ಈ ರೀತಿಯಾದಂತಹ ಯಾವುದೇ ಹೇಳಿಕೆ ನೀಡಿಲ್ಲ, ಮತ್ತು ಬರೆದಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪೋಸ್ಟ್ ಗಳನ್ನು ಪರಿಶೀಲಿಸಿ ಎಂದು ಕೋರುತ್ತೇನೆ. ನಾನು ಏನಾದರೂ ಹೇಳಲು ಬಯಸಿದರೆ, ಅದನ್ನು ಅಧಿಕೃತ ಮಾಧ್ಯಮಗಳಲ್ಲಿ ಹೇಳುತ್ತೇನೆ. ನೀವು ಸುರಕ್ಷಿತರಾಗಿದ್ದೀನಿ ಎಂದು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss