ಪ್ರತಿಯೊಬ್ಬರಿಗೂ ಕೆಲಸದಲ್ಲಿ ಸ್ವಲ್ಪ ಬಿಡುವು ಸಿಕ್ಕರೆ ಸಾಕು ಮನೆ ಕ್ಲೀನ್ ಮಾಡಲು ಮುಂದಾಗುತ್ತೇವೆ. ಮನೆಯ ಸ್ವಚ್ಛತಾ ಕಾರ್ಯ ಎಂದರೆ ನಿಮಗೇ ಗೊತ್ತಿರಬೇಕು. ವಿಪರೀತ ‘ೂಳು, ಕೊಳೆ, ಸಣ್ಣ ಪುಟ್ಟ ಕಾಗದದ ಚೂರುಗಳು, ಕಸ ಇತ್ಯಾದಿ ಎಲ್ಲವೂ ಇದ್ದೇ ಇರುತ್ತವೆ. ಮನೆ ಸ್ವಚ್ಛ ಮಾಡುವಷ್ಟು ಕಠಿಣ ಕೆಲಸ ಮತ್ತೊಂದಿಲ್ಲ ಎನಿಸುವಷ್ಟು ಆ ಸಮಯದಲ್ಲಿ ಬೇಸರವಾಗುತ್ತದೆ. ಆದರೂ ಕೂಡ ಹೇಗೋ ಕಷ್ಟ ಪಟ್ಟು ನಮ್ಮ ಮನೆಯನ್ನು ನಾವೇ ಸ್ವಚ್ಛ ಮಾಡಬೇಕಲ್ಲ. ಅದೂ ಅಲ್ಲದೆ ಸಿಗುವುದು ವಾರಕ್ಕೆ ಒಂದೇ ದಿನ ರಜೆ ಆಗಿರುವುದರಿಂದ ಅಳಿದುಳಿದ ಎಲ್ಲಾ ಕೆಲಸಗಳನ್ನು ಭಾ ನುವಾರವೇ ಮಾಡಿ ಮುಗಿಸಬೇಕಾಗುತ್ತದೆ. ಮನೆಯನ್ನು ಸ್ವಚ್ಛ ಮಾಡಲು ಮುಂದಾದ ಸಂಧರ್ಭ ಸಾ ಧ್ಯವಾದಷ್ಟು ಮುಖಕ್ಕೆ ಮೂಗು ಮತ್ತು ಬಾಯಿ ಮುಚ್ಚುವಂತೆ ಮಾಸ್ಕ್ ಹಾಕಿಕೊಂಡು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರೆ ಒಳ್ಳೆಯದು. ಇಷ್ಟಿದ್ದೂ ಕೂಡ ಕೆಲವೊಮ್ಮೆ ಸಣ್ಣ ಮತ್ತು ಅತಿ ಸಣ್ಣ ‘ಧೂಳಿನ ಕಣಗಳು ನಮ್ಮ ಕಣ್ಣುಗಳಿಗೆ ಹಾಗೂ ಮೂಗಿನ ಒಳಗೆ ಪ್ರವೇಶ ಮಾಡಿ ಕಣ್ಣಿನಿಂದ ಮತ್ತು ಮೂಗಿನಿಂದ ನೀರು ಸೋರುವಂತೆ ಮಾಡುತ್ತವೆ. ಕೆಲವರಿಗಂತೂ ಉಸಿರಾಡಲು ಕೂಡ ಈ ಸಮಯದಲ್ಲಿ ಕಷ್ಟ ಆಗುತ್ತದೆ. ಇದನ್ನೇ ’ ಡಸ್ಟ್ ಅಲರ್ಜಿ ’ ಎನ್ನುತ್ತೇವೆ.
ಹಾಗಾದರೆ ನಮ್ಮ ಮನೆಯ ಧೂಳಿನಿಂದ ನಮಗೆ ಈ ರೀತಿಯ ತೊಂದರೆ ಉಂಟಾದ ಸಂದ‘ರ್ದಲ್ಲಿ ಆ ಕ್ಷಣಕ್ಕೆ ನಮಗೆ ರಾಶಿ ಕೆಲಸ ಬಿದ್ದಿರುವುದರಿಂದ ಏನು ಮಾಡಬೇಕೆಂಬುದೇ ತಲೆ ಓಡುವುದಿಲ್ಲ. ಹಾಗೋ ಹೀಗೋ ಕೆಮ್ಮಿಕೊಂಡು ಸೀನಿಕೊಂಡು ಕೆಲಸ ಮುಗಿಸುತ್ತೇವೆ.ಆದರೆ ಸ್ವಚ್ಛತಾ ಕೆಲಸ ಮುಗಿದರೂ ಕೂಡ ನಮಗೆ ಎದುರಾದ ಡಸ್ಟ್ ಅಲರ್ಜಿ ಎಂಬ ಆರೋಗ್ಯ ಸಮಸ್ಯೆ ಮಾತ್ರ ಪರಿಹಾರ ಆಗಿರುವುದಿಲ್ಲ. ಎರಡು – ಮೂರು ದಿನಗಳವರೆಗೆ ಕೆಮ್ಮು ಹಾಗೂ ಸೀನು ನಮ್ಮನ್ನು ಕಾಡುತ್ತದೆ. ಆದ್ದರಿಂದ ಇಂತಹ ಸಮಸ್ಯೆಯಿಂದ ಪರಿಹಾರ ಕಾಣಲು ಮತ್ತು ತಕ್ಷಣವೇ ಇದರಿಂದ ಪಾರಾಗಲು ಏನು ಮಾಡಬಹುದು? ಇಂಥ ಚಿಕ್ಕ ಪುಟ್ಟ ವಿಷಯಗಳಿಗೆಲ್ಲಾ ವೈದ್ಯರ ಬಳಿ ಹೋಗಲು ಮನಸ್ಸು ಒಪ್ಪುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ಈ ಕೆಳಗಿನ ರೀತಿಯ ಕೆಲವೊಂದು ಮನೆ ಮದ್ದುಗಳನ್ನು ಬಳಸಿ ಅತ್ಯಂತ ತ್ವರಿತ ಗತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು. ಲೋಕಲ್ ಜೇನು ತುಪ್ಪ
ಜೇನು ತುಪ್ಪ ಆಯುರ್ವೇದ ಪ್ರಕಾರದಲ್ಲಿ ಆರೋಗ್ಯಕ್ಕೆ ಯಾವ ರೀತಿ ಒಳ್ಳೆಯದು ಎಂಬುದು ನಮಗೆಲ್ಲಾ ತಿಳಿದೇ ಇದೆ. ನಿಮ್ಮ ಮನೆಯ ‘ೂಳಿನಿಂದ ನೀವು ವಿಪರೀತ ಬಾಧಿತರಾಗಿದ್ದರೆ, ಹೆಚ್ಚು ಕೆಮ್ಮು ಮತ್ತು ಸೀನು ನಿಮ್ಮನ್ನು ಕಾಡುತ್ತಿದ್ದರೆ ೧ ಟೇಬಲ್ ಚಮಚ ಜೇನು ತುಪ್ಪವನ್ನು ಸವಿಯಿರಿ. ಜೇನು ತುಪ್ಪದಲ್ಲಿರುವ ಆಂಟಿ – ಇಂಪ್ಲಾಮ್ಮೆಟರಿ ಗುಣ ಲಕ್ಷಣಗಳು ನಿಮ್ಮ ಕೆಮ್ಮು ಮತ್ತು ಸೀನುಗಳನ್ನು ತಟ್ಟನೆ ನಿಲ್ಲಿಸುತ್ತದೆ. ಜೊತೆಗೆ ಕೆಲವರಿಗೆ ಅಲರ್ಜಿಯಿಂದ ಚರ್ಮದ ಮೇಲೆ ಉಂಟಾಗುವ ಕಲೆಗಳ ನಿವಾರಣೆಗೆ ಜೇನು ತುಪ್ಪವನ್ನು ಲೇಪನ ಮಾಡಿ ಕಲೆಗಳನ್ನು ನಿವಾರಿಸಿಕೊಳ್ಳಬಹುದು. ಕೆಲವೊಮ್ಮೆ ದೇಹದ ರೋಗ ನಿರೋ‘ಕ ಶಕ್ತಿ ದುರ್ಬಲವಾಗಿದ್ದರೆ ಸಣ್ಣಪುಟ್ಟ ‘ಧೂಳಿನ ಸಮಸ್ಯೆ ಎದುರಾದ ತಕ್ಷಣ ಆರೋಗ್ಯಕ್ಕೆ ‘ಾರಿ ಹಾನಿ ಉಂಟಾಗುತ್ತದೆ. ಚರ್ಮದ ಮೇಲೆ ಇದ್ದಕ್ಕಿದ್ದಂತೆ ಗುಳ್ಳೆಗಳು ಕಲೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ.ಹಾಗಾಗಿ ಈ ಸಮಯದಲ್ಲಿ ಉಂಟಾಗುವ ಹಾನಿಯನ್ನು ತಪ್ಪಿಸಲು ನಮ್ಮ ಆರೋಗ್ಯಕ್ಕೆ ಸಹಕಾರಿಯಾದ ಬ್ಯಾಕ್ಟೀರಿಯಾಗಳನ್ನು ನಮ್ಮ ಕರುಳಿನ ‘ಾಗಕ್ಕೆ ತಲುಪಿಸಬೇಕಾದ ಅನಿವಾರ್ಯತೆ ಇರುತ್ತದೆ. ನಾವು ಸೇವಿಸುವ ಆಹಾರಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಸಿಗುತ್ತವೆ ಎಂದರೆ ಅದು ಡೈರಿ ಉತ್ಪನ್ನಗಳಲ್ಲಿ ಮಾತ್ರ. ಹಾಗಾಗಿ ಮೊಸರು ಹಾಲಿನ ಕೆನೆ ಅಥವಾ ಗಟ್ಟಿ ಹಾಲಿನಲ್ಲಿ ಪ್ರೋಬಯೋಟಿಕ್ ಎಂದು ಹೆಸರು ಪಡೆದ ಒಳ್ಳೆಯ ಬ್ಯಾಕ್ಟೀರಿಯಾಗಳು ಸಿಗುತ್ತವೆ. ಹಾಗಾಗಿ ಡಸ್ಟ್ ಅಲರ್ಜಿ ಉಂಟಾದ ಸಂದ‘ರ್ದಲ್ಲಿ ಪ್ರೋಬಯೋಟಿಕ್ ಆಹಾರಗಳನ್ನು ಸೇವನೆ ಮಾಡಿ.
ಆಪಲ್ ಸೈರ್ಡ ವಿನೆಗರ್ ಎಲ್ಲಾ ಕಾಲದಲ್ಲೂ ನಮಗೆ ಸಹಾಯಕ್ಕೆ ಬರುವ ಒಂದು ದ್ರಾವಣ ಎಂದು ಹೇಳಬಹುದು. ‘ಧೂಳಿನಿಂದ ಉಂಟಾದ ಡಸ್ಟ್ ಅಲರ್ಜಿಯ ವಿರುದ್ಧ ಹೋರಾಡಲು ಇದೊಂದು ಅತ್ಯಂತ ಪರಿಣಾಮಕಾರಿಯಾದ ದಿನ ಬಳಕೆ ಪದಾರ್ಥ ಎಂದು ತಿಳಿದುಕೊಳ್ಳಬಹುದು. ನಿಮಗೆ ವಿಪರೀತ ದೂಳಿನಿಂದ ಕೆಮ್ಮು ಅಥವಾ ಸೀನುಗಳ ಸುರಿಮಳೆ ನಿರಂತರವಾಗಿ ನಡೆಯುತ್ತಿದ್ದರೆ ಒಂದು ಲೋಟ ನೀರಿಗೆ ೧ ಟೀ ಚಮಚ ಆಪಲ್ ಸೈರ್ಡ ವಿನಿರ್ಗ ಹಾಕಿ ಮಿಶ್ರಣ ಮಾಡಿ ದಿನಕ್ಕೆ ೩ ಬಾರಿ ಕುಡಿಯಿರಿ.
ಇದು ನಿಮ್ಮ ಮೂಗಿನ ಹಾಗೂ ಗಂಟಲಿನ ‘ಭಾಗದಲ್ಲಿ ಸಿಂಬಳವನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆಗೆ ತಡೆ ಹಾಕುತ್ತದೆ. ನಿಮ್ಮ ದುಗ್ಧರಸ ಗ್ರಂಥಿಗಳನ್ನು ಸ್ವಚ್ಛವಾಗಿಟ್ಟು ನಿಮ್ಮ ಕೆಮ್ಮು ಮತ್ತು ಸೀನುಗಳನ್ನು ಕಡಿಮೆ ಮಾಡುತ್ತದೆ. ಮೂಗಿನಲ್ಲಿ ಉಂಟಾದ ತೊಂದರೆಗೆ ನೀರಿನ ಹಾಗೆ ಅತ್ಯಂತ ಪರಿಣಾಮಕಾರಿಯಾದ ಮತ್ತು ಸ್ವಲ್ಪವೂ ಖರ್ಚಿಲ್ಲದ ಒಂದು ತಂತ್ರಗಾರಿಕೆಯನ್ನು ಹೇಳಬಹುದು. ‘ಧೂ ಳಿನಿಂದ ಮೂಗಿನಲ್ಲಿ ಕಿರಿಕಿರಿ ಒಂದಾಗಿ ಒಂದಾದ ಮೇಲೊಂದು ಸೀನುಗಳು ಬರುತ್ತಿರುತ್ತವೆ.ಈ ಸಮಯದಲ್ಲಿ ಇದರಿಂದ ಮುಕ್ತಿ ಪಡೆಯಲು ಒಂದು ಸ್ವಲ್ಪ ದೊಡ್ಡದಾದ ಬೌಲ್ ತೆಗೆದುಕೊಂಡು ಅದಕ್ಕೆ ಚೆನ್ನಾಗಿ ಸ್ಟೌವ್ ಮೇಲೆ ಕುದಿಸಿದ ನೀರನ್ನು ಸುರಿದು ನಿಮ್ಮ ತಲೆಯ ಮೇಲೆ ಟವಲ್ ಅಗಲಿಸಿ ಹಿಡಿದುಕೊಂಡು ನೀವು ಮುಂದಕ್ಕೆ ಬಾಗಿ ಬೌಲ್ ನಿಂದ ಮೇಲೆ ಬರುತ್ತಿರುವ ನೀರಿನ ಆವಿಯನ್ನು
ನಿಮ್ಮ ಮೂಗು ಹಾಗೂ ಬಾಯಿಯ ಮೂಲಕ ಒಳ ತೆಗೆದುಕೊಳ್ಳಿ. ಕನಿಷ್ಠ ಹತ್ತು ನಿಮಿಷಗಳ ಕಾಲ ಈ ರೀತಿ ಮಾಡುವುದರಿಂದ, ನಿಮ್ಮ ಮೂಗು ಹಾಗೂ ಗಂಟಲಿನ ಭಾಗ ಸಂಪೂರ್ಣವಾಗಿ ಸ್ವಚ್ಛವಾಗಿ ನಿಮಗೆ ಸೀನುಗಳು ಬರುವುದು ಕಡಿಮೆ ಆಗುತ್ತದೆ.
ವಿಟಮಿನ್ ’ಸಿ ’
ಇದು ನಿಮ್ಮ ದೇಹದ ರೋಗ ನಿರೋ‘ಕ ಶಕ್ತಿಯನ್ನು ಹೆಚ್ಚಿಸುವ ಅಂಶವಾಗಿದ್ದು, ಹೆಚ್ಚಾಗಿ ಸಿಟ್ರಸ್ ಅಂಶವನ್ನು ಹೊಂದಿದ ಹಣ್ಣುಗಳಲ್ಲಿ ಕಂಡು ಬರುತ್ತದೆ. ಉದಾಹರಣೆಗೆ ನಿಂಬೆಹಣ್ಣು, ಕಿತ್ತಳೆ ಹಣ್ಣು ಮೋಸಂಬಿ ಹಣ್ಣು ಇತ್ಯಾದಿ.