Thursday, August 11, 2022

Latest Posts

ಡಾಲಿ ಧನಂಜಯ್ಗೆ ಜೋಡಿಯಾಗಲಿದ್ದಾರೆ ರಚಿತಾ ರಾಮ್ ? ಯಾವ ಸಿನಿಮಾ

ನಟಿ  ರಚಿತಾ ರಾಮ್  ಬತ್ತಳಿಕೆಯಲ್ಲಿ  ಸಾಲು  ಸಾಲು  ಸಿನಿಮಾಗಳಿವೆ. ಈ  ಲಾಕ್‌ಡೌನ್  ನಡುವೆಯೂ  ರಚಿತಾ ರಾಮ್  ಹೊಸ  ಚಿತ್ರಗಳಿಗೆ  ಸಿಹಿ  ಮಾಡಿದ್ದಾರೆ.  ಕೊರೋನಾ  ಮುಗಿಯುತ್ತಿದ್ದಂತೆ  ಒಂದೊಂದು  ಸಿನಿಮಾಗಳ ಶೂಟಿಂಗ್‌ನಲ್ಲಿ   ಅವರು  ಭಾಗಿಯಾಗಲಿದ್ದಾರೆ.  ಇದರ  ಜೊತೆಗೆ  ಅವರು  ಇನ್ನೊಂದು  ಹೊಸ  ಸಿನಿಮಾಕ್ಕೆ  ಸಿಹಿ ಮಾಡಿದ್ದಾರೆ  ಎಂಬ  ಸುದ್ದಿ  ಹರಡುತ್ತಿದೆ.

ಮೊದಲ ಸಲ ಖ್ಯಾತಿಯ ನಿರ್ಮಾಪಕ ಯೋಗೇಶ್ ನಾರಾಯಣ್ ನಿರ್ಮಾಣ ಮಾಡಲಿರುವ, ಪ್ರ‘ು ಶ್ರೀನಿವಾಸ್ ನಿರ್ದೇಶನದ ’ಡಾಲಿ’ ಸಿನಿಮಾದಲ್ಲಿ ‘ನಂಜಯ ಹೀರೋ ಆಗಿ ನಟಿಸುತ್ತಿರುವುದು ಗೊತ್ತೇ ಇದೆ. ಆ ಸಿನಿಮಾದಲ್ಲಿ ಅವರಿಗೆ ರಚಿತಾ ರಾಮ್ ಜೋಡಿ ಎಂಬುದು ಕೂಡ ಈ ಹಿಂದೆಯೇ ಬಹಿರಂಗ ಆಗಿತ್ತು. ಆ ಚಿತ್ರದ ಶೂಟಿಂಗ್ ಕೆಲಸಗಳು ಇನ್ನೂ ಬಾಕಿ ಇದೆ. ಅಷ್ಟರಲ್ಲಾಗಲೇ ಮತ್ತೊಂದು ಸಿನಿಮಾದಲ್ಲಿ ರಚಿತಾ ರಾಮ್ ಮತ್ತು ‘ನಂಜಯ ಒಂದಾಗುವ ಸಾ ಧ್ಯತೆ ಇದೆ.

ಕೆಲವೇ ದಿನಗಳ ಹಿಂದೆ ’ಪುಷ್ಪಕ ವಿಮಾನ’ ನಿರ್ಮಾಪಕರ ಜೊತೆ ಹೊಸದೊಂದು ಚಿತ್ರಕ್ಕಾಗಿ ರಚಿತಾ ರಾಮ್ ಮಾತುಕತೆ ಮಾಡುತ್ತಿದ್ದಾರೆ ಎಂಬ ಸುದ್ದಿ  ಕೇಳಿಬರುತ್ತಿದೆ. ಎಸ್. ರವೀಂದ್ರನಾಥ್ ಆ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಅದರಲ್ಲಿ ಡಾಲಿ ಧನಂಜಯ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಸಿನಿಮಾದಲ್ಲಿ ರಚಿತಾಗೆ ಡಿರೆಂಟ್ ಆದಂತಹ ಪಾತ್ರವಿದ್ದು, ಕಥೆ ಕೇಳಿ ಅವರು ಇಷ್ಟಪಟ್ಟಿದ್ದಾರೆ ಎನ್ನಲಾಗುತ್ತಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss