ಧಾರವಾಡ: ಕರ್ನಾಟಕ ಪಶ್ಚಿಮ ವಿಧಾನ ಪರಿಷತ್ ಪಶ್ಚಿಮ ಪದವೀಧರರ ಮತದಾರರ ಒಲವು ಕಾಂಗ್ರೆಸ್ ಪರವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಆರ್.ಎಂ.ಕುಬೇರಪ್ಪ ಹೇಳಿದರು.
ಬುಧವಾರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಭಾರಿ ಎಚ್.ಕೆ.ಪಾಟೀಲರು ಗೆದ್ದರು ಪಶ್ಚಿಮ ಕ್ಷೇತ್ರದಲ್ಲಿ ಈ ಭಾರಿಯೂ ಕಾಂಗ್ರೆಸ್ ಪರ ಗಾಳಿ ಬಿಸಿದೆ ಎಂದು ಹೇಳಿದರು.
ಕೆಲ ತಪ್ಪು ನಿರ್ಧಾರಗಳಿಂದ ಈ ಕ್ಷೇತ್ರದಲ್ಲಿ ನನಗೆ ಎರಡು ಭಾರಿ ಹಿನ್ನಡೆಯಾಗಿದೆ. ಪದವೀಧರ ಕ್ಷೇತ್ರದ ಕೆಪಿಸಿಸಿ ರಾಜ್ಯಾಧ್ಯಕ್ಷ ನಾನೇ ಇದ್ದು, ಹಿಂದಿನ ತಪ್ಪು ಸರಿಪಡಿಸಿದೆ. ಪುನಃ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಿದೆ ಎಂದರು.
ಈಗಾಗಲೇ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ನಾಲ್ಕು ಜಿಲ್ಲೆಗಳಲ್ಲಿ ಮೂರು ಭಾರಿ ಸಂಚಾರ ಮಾಡಿ, ಹೆಚ್ಚು ಮತದಾರರ ನೋಂದಣಿಯನ್ನು ಮಾಡಿಸಿದ್ದು, ಮತದಾರರಿಂದ ಉತ್ತಮ ಬೆಂಬಲವೂ ಇದೆ ಎಂದು ಹೇಳಿದರು.
ಕ್ಷೇತ್ರದ ಮತದಾರರ ಮನೆ ಮನೆಗೆ ಕಾರ್ಯಕರ್ತರು ತೆರಳಿ ಓಲೈಸುವ ಕೆಲಸ ಮಾಡಿದ್ದಾರೆ. ಕೋವಿಡ್ ಹಿನ್ನಲೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರಾಜಕೀಯ ಸಭೆ, ಪ್ರಚಾರ ನಡೆಸುವುದಾಗಿ ತಿಳಿಸಿದರು.