Wednesday, June 29, 2022

Latest Posts

ಡಾ. ಎಸ್.ಎಲ್.ಭೈರಪ್ಪರನ್ನು ಭೇಟಿಯಾಗಿ ಚರ್ಚೆ ನಡೆಸಿದ ಸಚಿವ ರಮೇಶ್ ಜಾರಕಿ ಹೊಳಿ

ಮೈಸೂರು: ಬಿಡುವಿಲ್ಲದ ಓಡಾಟದ ಮಧ್ಯೆಯೂ, ಕನ್ನಡದ ಅಗ್ರಗಣ್ಯ ಲೇಖಕರೂ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕöÈತರಾದ ಹಿರಿಯ ಸಾಹಿತಿ, ಕಾದಂಬರಿಕಾರರಾದ ಡಾ. ಎಸ್ ಎಲ್ ಭೈರಪ್ಪರ ಮನೆಗೆ ಶುಕ್ರವಾರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದರು.
ಮೈಸೂರಿನ ಕುವೆಂಪು ನಗರದ ಉದಯರವಿ ರಸ್ತೆಯಲ್ಲಿರುವ ಡಾ.ಎಸ್.ಎಲ್. ಭೈರಪ್ಪರ ಮನೆಗೆ ಆಗಮಿಸಿದ ಸಚಿವರು, ಭೈರಪ್ಪನವರೊಂದಿಗೆ ಕುಶಲೋಪರಿ, ಸಮಾಲೋಚನೆ ನಡೆಸಿದರು.
ಡಾ.ಎಸ್.ಎಲ್. ಭೈರಪ್ಪ ಅವರ ಜ್ಞಾನ ಭಂಡಾರ ಅಗಾಧ. ಇಂತಹಾ ಇಳಿ ವಯಸ್ಸಿನಲ್ಲಿಯೂ, ಅಖಂಡ ಭಾರತದ ಚರಿತ್ರೆಯ ಬಗ್ಗೆ, ಟಿಪುö್ಪ ಆಕ್ರಮಣ, ಯದುವಂಶ ದೊರೆಗಳಿಗಿದ್ದ ಸಾಮಾಜಿಕ ಕಳಕಳಿ ಇತ್ಯಾದಿ ಹಲವು ಜ್ವಲಂತ ವಿಷಯಗಳ ಬಗ್ಗೆಯೂ ಅವರು ಚರ್ಚಿಸಿದ್ದು ವಿಶೇಷ. ನಾನೂ ಸಹಾ ಭಿತ್ತಿ, ಮತದಾನ, ಆವರಣ, ಗೃಹಭಂಗ ಕಾದಂಬರಿಗಳ ಸೂಕ್ಷ÷್ಮತೆಯ ಕುರಿತು ಭೈರಪ್ಪನವರೊಂದಿಗೆ ಮಾತನಾಡಿದೆನು. ಅದಕ್ಕೇ ಹೇಳುವುದು. – ಕನ್ನಡ ಸಾರಸ್ವತ ಲೋಕದಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿ ಎಂದು ಸಚಿವ ರಮೇಶ್ ಜಾರಕಿ ಹೊಳಿ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss