Wednesday, August 17, 2022

Latest Posts

ಡಾ.ಎಸ್.ಪಿ.ಬಿ. ನಿಧನದಿಂದ ಮಹಾನ್ ಗಾಯಕನೊಬ್ಬನನ್ನು ದೇಶ ಕಳೆದುಕೊಂಡಿದೆ: ರಾಜೀವ್

ಮೈಸೂರು: ಸಂಗೀತ ದಿಗ್ಗಜ, ಖ್ಯಾತ ಹಿನ್ನೆಲೆ ಗಾಯಕ, ನಟ, ನಿರ್ಮಾಪಕ, ಸಂಗೀತ ನಿರ್ದೇಶಕ ಪದ್ಮಶ್ರೀ ಪ್ರಶಸ್ತಿ ಪುರಸ್ಕöÈತ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ (ಡಾ.ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ) ನಿಧನದಿಂದಾಗಿ ದೇಶ ಮಹಾನ್ ಗಾಯಕನೊಬ್ಬನನ್ನು ಕಳೆದುಕೊಂಡಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಶೋಕ ವ್ಯಕ್ತಪಡಿಸಿದ್ದಾರೆ.
೧೬ಕ್ಕೂ ಅಧಿಕ ಭಾಷೆಗಳಲ್ಲಿ ೪೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಗಾನಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಶಾಶ್ವತ ಮೌನಕ್ಕೆ ಶರಣಾಗಿದೆ. ತಮ್ಮ ಗಾಯನದ ಮೂಲಕವೇ ಮನೆ ಮನೆ ಮಾತಾಗಿದ್ದ ಅವರು
ಚಿತ್ರಗೀತೆಗಳ ಜತೆಗೆ ಹಾಡಿದ ದೇವರನಾಮ, ಭಾವಗೀತೆಗಳಿಗೆ ಲೆಕ್ಕವಿಲ್ಲ. ಇದರೊಂದಿಗೆ ಕಿರುತೆರೆಯಲ್ಲಿ ಸಾವಿರಾರು ಎಪಿಸೋಡುಗಳನ್ನು ನಡೆಸಿಕೊಟ್ಟಿದ್ದಾರೆ. ಅವರ ನೇತೃತ್ವದ ಕನ್ನಡದ “ಎದೆತುಂಬಿ ಹಾಡಿದೆನು’ ಜನಪ್ರಿಯತೆ ಹೊಂದಿತ್ತು. ಅವರಿಗೆ ಸಂದ ಪ್ರಶಸ್ತಿಗಳು ಅನೇಕ. ಪದ್ಮಶ್ರೀ, ಪದ್ಮಭೂಷಣ, ಆರು ರಾಷ್ಟç ಪ್ರಶಸ್ತಿಗಳು, ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯ ಸರ್ಕಾರಗಳಿಂದ ಒಟ್ಟು ೨೩ ಪ್ರಶಸ್ತಿಗಳು ಬಂದಿವೆ. ನಾಲ್ಕು ವಿಶ್ವವಿದ್ಯಾನಿಲಯಗಳಿಂದ ನಾಲ್ಕು ಡಾಕ್ಟರೇಟ್ ಗೌರವಕ್ಕೂ ಪಾತ್ರರಾಗಿದ್ದರು.ಆ ಭಗವಂತ ಅವರಿಗೆ ಚಿರಶಾಂತಿ ನೀಡಲಿ ಎಂದು ಪ್ರಾಥಿ೯ಸುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!