ರಾಮನಗರ: ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಅಪಾರ ಕೊಡುಗೆ ಬಿಟ್ಟು ಹೋಗಿರುವ ಡಾ. ಮಧುಸೂದನ ಜೋಷಿಯವರು ಸಾರಸ್ವತ ಲೋಕದ ಮಹಾನ್ ಚೇತನ ಎಂದು ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ಡಾ. ರಾ.ಬಿ.ನಾಗರಾಜ್ ಹೇಳಿದರು. ರಾಮನಗರದ ಎಬಿಸಿಡಿ ನೃತ್ಯ ಶಾಲೆ ಸಭಾಂಗಣದಲ್ಲಿ ಸಂಘ-ಸಂಸ್ಥೆ, ಸಾಹಿತಿ, ಕಲಾವಿದರಿಂದ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಅಗಲಿದ ಪ್ರಾಧ್ಯಾಪಕ ಹಾಗೂ ಸಾಹಿತಿ, ವಿರ್ಶಕ ಡಾ.ಮಧುಸೂದನ ಜೋಷಿ ದಂಪತಿಗಳಿಗೆ ರ್ಪಡಿಸಿದ್ದ ನುಡಿನಮನ ಕರ್ಯಕ್ರಮದಲ್ಲಿ ಮಾತನಾಡಿದರು. ತಮ್ಮ ಬದುಕಿನಾಚೆಗೆ ಸಮಾಜಕ್ಕೆ ತಮ್ಮ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಬೇಕಾದ್ದು ನಮ್ಮ ರ್ತವ್ಯ. ಅಪಾರ ಶಿಷ್ಯವೃಂದದ ನೆಚ್ಚಿನ ಗುರುವಾಗಿದ್ದ ಡಾ.ಜೋಷಿಯವರು ಇಂತಹ ದುರಂತದಲ್ಲಿ ಅಗಲಿದ್ದು ತುಂಬಾ ನೋವಿನ ವಿಚಾರ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಜಾಗರೂಕರಾಗಿದ್ದರೆ ಕ್ಷಣರ್ಧದಲ್ಲಿ ಹಾರಿ ಹೋಗುವ ಇಂತಹ ಜೀವಗಳನ್ನು ರಕ್ಷಿಸಬಹುದು ಎಂದರು. ಸಾಹಿತಿ ಪ್ರಾಧ್ಯಾಪಕ ಪ್ರೊ. ವಿ.ಎಚ್.ರಾಜಶೇಖರ್ ಮಾತನಾಡಿ, ಡಾ.ಜೋಷಿಯವರು ನನ್ನಂತಹ ಅನೇಕರ ಪಾಲಿನ ಜ್ಞಾನಕೋಶ. ಬಹುದೊಡ್ಡ ಶಬ್ಧಕೋಶ ಅವರಾಗಿದ್ದರು. ಈ ಜಿಲ್ಲೆಯ ಸಾಹಿತ್ಯ-ಸಂಸ್ಕೃತಿಯ ರಾಯಭಾರಿಯಾಗಿದ್ದರು. ಸಾವಿರಾರು ವಿದ್ಯರ್ಥಿಗಳ ಪಾಲಿನ ಜ್ಞಾನೇಂದು ಅವರು. ಅಸತ್ಯದ ವಿರುದ್ಧ ಯಾವ ಮುಲಾಜಿಲ್ಲದೆ ಸಿಡಿದೇಳುತ್ತಿದ್ದ ಸತ್ಯದ ನಿಧಿ. ವಿಧಿಯ ಕ್ರೂರ ಬೈರಿಗೆಗೆ ಸತಿ-ಪತಿಗಳ ಬಲಿಯಾಗಿದ್ದು, ಬಹುದೊಡ್ಡ ದುರಂತ. ಒಡಗೂಡಿ ಬಾಳಿದ ದಂಪತಿಗಳು ಸಾವಿನಲ್ಲೂ ಒಂದಾದರು ಎಂದು ಕಂಬನಿ ಮಿಡಿದರು. ಸಂಗೀತ ವಿದ್ವಾನ್ ಶಿವಾಜಿರಾವ್, ಸಾಹಿತಿಗಳಾದ ಡಾ. ಎಚ್.ವಿ.ಮರ್ತಿ, ಶ್ರೀಮತಿ ಶೈಲಾ ಶ್ರೀನಿವಾಸ್, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ರಾಷ್ಟçಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಜಶೇಖರ್ ಪಾಟೀಲ್, ಅಂತರರಾಷ್ಟಿçÃಯ ಯೋಗಪಟು ಶಿವಕುಮಾರ್, ನಂದಗೋಕುಲ ವೃದ್ಧಾಶ್ರಮದ ಸಂಸ್ಥಾಪಕ ಎನ್.ವಿ.ಲೋಕೇಶ್, ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಸ್.ರೇಣುಕಾಪ್ರಸಾದ್, ಮಹಾದೇವ್, ನೃತ್ಯ ಕಲಾವಿದ ಚಂದನ್ ಅಗಲಿದ ಡಾ.ಮಧುಸೂದನ ಜೋಷಿ ದಂಪತಿಗಳಿಗೆ ನುಡಿನಮನ ಸಲ್ಲಿಸಿದರು.