Wednesday, July 6, 2022

Latest Posts

ಡಾ.ಬಿ.ಆರ್.ಅಂಬೇಡ್ಕರ್ ಭವನ ಸದುಪಯೋಗಪಡಿಸಿಕೊಳ್ಳಿ: ಬಿ.ಶ್ರೀರಾಮುಲು

ಹೊಸ ದಿಗಂತ ವರದಿ, ರಾಮನಗರ:

ಅಂಬೇಡ್ಕರ್ ಭವನನ್ನು ಮದುವೆ ಸಮಾರಂಭಗಳಿಗೆ ಸೀಮಿತಗೊಳಿಸದೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ
ವರ್ಗಗಳ ಮುಖಂಡರು ತಮ್ಮ ಸುತ್ತಮುತ್ತಲಿನ ಹಾಗೂ ಸಮುದಾಯದವರ ಎಳಿಗೆಗಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಭೆ, ಕಾರ್ಯಕ್ರಮ ಹಾಗೂ ಚರ್ಚೆ ಮಾಡಲು ಬಳಸಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದರು.
ಅವರು ಇಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ
6.18 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ  ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದರು.
ಡಾ. ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ಸಮಾಜದ ಬೆಳಕು. ಜಾತಿ ಪದ್ಧತಿ ವ್ಯವಸ್ಥೆ ಇದ್ದ ಸಂದರ್ಭದಲ್ಲಿ ಸಮಾಜದ ಕಟ್ಟುಪಾಡುಗಳ ನಡುವೆ ಆತ್ಮವಿಶ್ವಾಸ, ಸಹನೆ, ದೈರ್ಯ ಹಾಗೂ ಉತ್ಸಾಹದಿಂದ ವಿದ್ಯಾಭ್ಯಾಸ ನಡೆಸಿ ಭಾರತ ದೇಶಕ್ಕೆ ಸಂವಿಧಾನ ನೀಡಿ ಇಡೀ ವಿಶ್ವವೇ ಅವರನ್ನು ಸದಾ ಸ್ಮರಿಸಿಕೊಳ್ಳುವಂತಹ ಸಾಧನೆ ಮಾಡಿದ್ದಾರೆ. ಅವರ ಸಾಧನೆಯ ಪ್ರತಿಯೊಬ್ಬರಿಗೂ ದಾರಿದೀಪ ಎಂದರು. ಡಾ: ಬಿ.ಆರ್.ಅಂಬೇಡ್ಕರ್ ಅವರು ಜೀವನದಲ್ಲಿ ಬಹಳ ಕಷ್ಟಗಳ ನಡುವೆ ಮುಂದೆ ಬಂದಿದ್ದಾರೆ.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರ ಸಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹೋರಾಟದಲ್ಲಿ ವಿದ್ಯಭ್ಯಾಸ ಹಾಗೂ ಜ್ಞಾನರ್ಜನೆ ಅವರ ಸಾಧನಗಳಗಿತ್ತು. ಪ್ರತಿ ದಿನ 18 ಗಂಟೆಗಳ ಕಾಲ ವಿದ್ಯಾಭ್ಯಾಸ ನಡೆಸುತ್ತಿದ್ದರು ಎಂದರು.
ಡಾ.ಬಿ.ಆರ್.ಅಂಬೇಡ್ಕರ್  ಅವರು ಒಂದು ಬಾರಿ ನ್ಯೂಯಾರ್ಕ್ ನ ಗ್ರಂಥಾಲಯದಲ್ಲಿ ಬಡತನದಿಂದಾಗಿ ಹಾಗೂ ಸಮಯ ವ್ಯರ್ಥವಾಗುತ್ತದೆ ಎಂದು ಗ್ರಂಥಾಲಯದಲ್ಲೇ ತಮ್ಮ ಬಳಿ ಇದ್ದ ಬ್ರೆಡ್ ಸೇವಿಸಿದರು. ಬಹಳಷ್ಟು ಜನರು  ಗ್ರಂಥಾಲಯದಲ್ಲಿ ಬ್ರೆಡ್ ಸೇವಿಸುವುದು  ನಿಯಮ ಬಾಹಿರ ಎಂದರು. ಗ್ರಂಥಾಲಯದ ಮೇಲ್ವಿಚರಕರು ವಿಚಾರಿಸಿದಾಗ ಅವರು ತಮ್ಮ ಬಡತನ ಹಾಗೂ ಸಮಯ ಉಳಿತಾಯದ ಬಗ್ಗೆ ನೋವಿನಿಂದ ತಿಳಿಸಿದರು. ಗ್ರಂಥಾಲಯದ ಮೇಲ್ವಿಚರಕರು ಅಂದೆ ಈ ವಿದ್ಯಾರ್ಥಿ ಮಹಾನ್ ವ್ಯಕ್ತಿಯಾಗಿ ಬೆಳೆಯುತ್ತಾರೆ ಎಂದು ನುಡಿದಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಜೀವನದಲ್ಲಿ ಜನರು  ಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜ್ಞಾನದಿಂದ ಬಹಳಷ್ಟು ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಜಕೀಯ ಉಳಿದ ಸಮಯದಲ್ಲಿ ಸದಾ ಸಮಾಜದ ಒಳಿತಿಗಾಗಿ ಕೆಲಸ ಮಾಡಲಾಗುತ್ತದೆ. ತಾಲ್ಲೂಕಿನ ಅಭಿವೃದ್ಧಿಗೆ ಸದಾ ಬದ್ಧವಾಗಿದ್ದು, ಕೆಲವರಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆಯನ್ನು ಇನ್ನೂ ಅದ್ದೂರಿಯಾಗಿ ಮಾಡಬೇಕು ಎಂಬ ಆಸೆ ಇತ್ತು. ಈ ಹಿನ್ನಲೆಯಲ್ಲಿ ಎಪ್ರಿಲ್ 14 ರಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ದೊರೆಯುವ ಯೋಜನೆಗಳ ಕುರಿತು ದೊಡ್ಡ ಸಮಾರಂಭ ಆಯೋಜಿಸೋಣ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಂ.ಲಿ.ನಾಗರಾಜು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ದೇವರಾಜು, ಚನ್ನಪಟ್ಟಣ ತಹಶೀಲ್ದಾರ್ ನಾಗೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss