ಹೊಸದಿಲ್ಲಿ: ವೋಡಾಫೋನ್ ಐಡಿಯಾ ಸಂಸ್ಥೆ 2014ರ ಹರಾಜಿನಲ್ಲಿ ಖರೀದಿಸಿದ ತರಂಗ ಸಂಪರ್ಕ ಸಂಬಂಧಿಸಿದಂತೆ ದೂರ ಸಂಪರ್ಕ ಇಲಾಖೆಗೆ (ಡಿಒಟಿ) ಮಂಗಳವಾರ 3042.80 ಕೋಟಿ ರೂ.ಗಳನ್ನು ಪಾವತಿಸಿದೆ.
ಜತೆಗೆ ಭಾರ್ತಿ ಏರಟೆಲ್ 1,950 ಕೋಟಿ ರೂ. ಮತ್ತು ಹಾಗೂ ರಿಲಯನ್ಸ್ ಜಿಯೋ 1,053 ಕೋಟಿ ರೂ. ಬಾಕಿ ಪಾವತಿಸಿವೆ. ವೋಡಾಪೋನ್ ಇನ್ನೂ 5,35,500 ಕೋಟಿ ರೂ. ಹೊಂದಾಣಿಕೆ ಒಟ್ಟು ಆದಾಯ (ಎಜಿಆರ್ ) ಬಾಕಿ ಪಾವತಿಸಬೇಕಿದೆ. ಅಲ್ಲದೆ, ಸದ್ಯದಲ್ಲಿಯೇ ಎಜಿಆರ್ ಬಾಕಿಯನ್ನು ಪಾವತಿಸುವುದಾಗಿಯೂ ಮಂಗಳವಾರ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ವೋಡಾಪೋನ್ ಸಂಸ್ಥೆ ಈಗಾಗಲೇ 3,500 ಕೋಟಿ ರೂ. ಬಾಕಿ ಪಾವತಿಸಿದ್ದು, ಇನ್ನೂ 5,35,500 ಕೋಟಿ ರೂ. ಪಾವತಿಸಬೇಕಿದ್ದು, ಸ್ವಲ್ಪ ಸಮಯ ನೀಡುವಂತೆ ದೂರ ಸಂಪರ್ಕ ಇಲಾಖೆಗೆ ಮನವಿ ಮಾಡಿದೆ. ಬಾಕಿ ಪಾವತಿ ಸರಿಯಾದ ಕ್ರಮದಲ್ಲಿ ಆಗದಿದ್ದಲ್ಲಿ ಸಂಪರ್ಕ ಕಡಿತಗೊಳಿಸುವುದಾಗಿಯೂ ಎಚ್ಚರಿಕೆ ನೀಡಿದೆ.