Friday, January 22, 2021

Latest Posts

ಡಿಕೆಶಿಗೆ ಮತ್ತೆ ಸಿಬಿಐ ಶಾಕ್: ನ. 23ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್: 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ನವೆಂಬರ್ 23ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನಲ್ಲಿ ಸೂಚಿಸಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಸಮನ್ಸ್ ನವೆಂಬರ್ 19 ರಂದು ನನಗೆ ಬಂದಿದೆ. 25 ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಗಳ ಮದುವೆಯ ಕೆಲಸದಲ್ಲಿ ನ.19ರಂದು ಬ್ಯೂಸಿ ಇದ್ದೆ. ಅವತ್ತೆ ಸಮಸ್ಸ್ ನೀಡಿದ್ದು, ನ.23 ರಂದು ಹಾಜರಾಗುವಂತೆ ಹೇಳಿದ್ದಾರೆ. ಆದರೆ ನಾಳೆಯಿಂದ ಉತ್ತರ ಕರ್ನಾಟಕ ಪ್ರವಾಸ ಆಯೋಜಿಸಲಾಗಿದೆ. ಹಾಗಾಗಿ 25 ಕ್ಕೆ ಹಾಜರಾಗುವುದಾಗಿ ಸಿಬಿಐ ಗೆ ಮನವಿ ಮಾಡಿಕೊಂಡಿದ್ದೇನೆ. ಅವರು ಇದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.

 

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!