spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡಿಕೆಶಿ ಅವರಿಗೆ ಬಿಜೆಪಿಗಿಂತ ಸಿದ್ದರಾಮಯ್ಯ ಅವರ ಕಾಟವೇ ಜಾಸ್ತಿ: ಸಚಿವ ಅಶೋಕ್

- Advertisement -Nitte

ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಬಿಜೆಪಿಗಿಂತ ಸಿದ್ದರಾಮಯ್ಯ ಅವರ ಕಾಟವೇ ಜಾಸ್ತಿಯಾಗಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಸರಕಾರ ಇದೆಯೋ ಇಲ್ಲವೋ ಎಂಬ ವಿಪಕ್ಷ ನಾಯಕರ ಪ್ರಶ್ನೆಗೆ ಸಚಿವರು ಶುಕ್ರವಾರ ಉಡುಪಿಯಲ್ಲಿ ಉತ್ತರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಅವರು ಮೊದಲು ಸಿದ್ದರಾಮಯ್ಯ ಅವರ ಕಾಟದಿಂದ ತಪ್ಪಿಸಿಕೊಂಡು ಹೊರಬರಲಿ. ಆಮೇಲೆ ರಾಜ್ಯ ಸರಕಾರದ ವಿರುದ್ಧ ಟೀಕೆ ಮಾಡಲಿ ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ವಿರೋಧ ಪಕ್ಷ ಇದೆಯೋ ಇಲ್ಲವೋ ಎಂಬುದೇ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ ಅವರು ಕೊರೋನಾದಿಂದ ಆಸ್ಪತ್ರೆಯಲ್ಲಿದ್ದಾರೆ. ಡಿಕೆಶಿ ಇನ್ನೂ ಪದಗ್ರಹಣ, ಸನ್ಮಾನದ ಗುಂಗಿನಲ್ಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಿನ್ನೂ ಫೀಲ್ಡಿಗೆ ಇಳಿದಿಲ್ಲ. ಆದರೆ ನಮ್ಮ ಮುಖ್ಯಮಂತ್ರಿಗಳು ಅಷ್ಟು ವಯಸ್ಸಾದರೂ ಕ್ರಿಯಾಶೀಲರಾಗಿದ್ದಾರೆ ಎಂದು ಹೇಳಿದ ಸಚಿವ ಅಶೋಕ್, ವಿಪಕ್ಷದವರು ಕಾಮಾಲೆ ಕಣ್ಣಿಂದ ನೋಡಿದರೆ ನಮ್ಮ ಕೆಲಸ ಕಾಣುವುದಿಲ್ಲ. ಸರಕಾರ ಎಲ್ಲದಕ್ಕೂ ಉತ್ತರ ಕೊಡಲು ಸಿದ್ಧವಿದೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss