Sunday, June 26, 2022

Latest Posts

ಡಿಕೆಶಿ ಬಳಿ ಸಿಡಿ ಇದ್ರೇ ಬಿಡುಗಡೆ ಮಾಡಲಿ: ನಳಿನ್ ಕುಮಾರ್ ಕಟೀಲ್

ಹೊಸ ದಿಗಂತ ವರದಿ ಚಿಕ್ಕಬಳ್ಳಾಪುರ:

ಸಿಎಂ ಬಿಎಸ್‍ವೈ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಡಿಕೆಶಿಯವರ ಹೇಳಿಕೆ ಸರಿಯಲ್ಲ. ಡಿಕೆ ಶಿವಕುಮಾರ್ ಬಳಿ ಸಿಡಿ ಇದ್ದರೆ ಬಿಡುಗಡೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್  ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಗ್ರಾಮ ಸ್ವರಾಜ್ಯ ಸಮಾವೇಶಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕಾಗಿ ಜನರನ್ನು ದಿಕ್ಕು ತಪ್ಪಿಸವ ರೀತಿಯಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡಬಾರದು, ಇದು ಸರಿಯಲ್ಲ ಎಂದು ಡಿಕೆಶಿ ವಿರುದ್ದ‌ ಕಿಡಿಕಾರಿದರು.

ಕಟೀಲ್‍ಗೆ ರಾಜಕೀಯ ಪ್ರಬುದ್ಧತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ರಾಜಕೀಯ ಸರ್ವಜ್ಞ. ಅಂತಹ ಮಹಾನ್ ಜ್ಞಾನಿ ಬಗ್ಗೆ ನಾನು ಹೆಚ್ಚು ಮಾತನಾಡೋದಿಲ್ಲ ಎಂದು ಕಟೀಲ್ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಇದೇ ವೇಳೆ ಬಿಜೆಪಿ ಪಕ್ಷದಲ್ಲಿ ಮೂಲ ಹಾಗೂ ವಲಸಿಗರು ಎನ್ನುವ ಪದದ ಕುರಿತಾಗಿ ಮಾತನಾಡಿ ಬಿಜೆಪಿ ಬಿ ಫಾರಂ ಪಡೆದು ಪಕ್ಷಕ್ಕೆ ಬಂದವರು. ಬಿಜೆಪಿ ಸರ್ಕಾರ ರಚನೆಗೆ ಸಹಕಾರ ಕೊಟ್ಟ ಪ್ರತಿಯೊಬ್ಬರಿಗೂ ಕೊಟ್ಟ ಮಾತನ್ನು ಉಳಿಸಿಕೊಂಡು ನ್ಯಾಯ ಕೊಡುತ್ತಿದ್ದೇವೆ. ಎಂಟಿಬಿ ಹಣೆಬರಹ ಸರಿಯಲ್ಲ ಅಂತ ಹೇಳಿರೋದು ನೋವಿನಿಂದಲ್ಲ ಬದಲಾಗಿ ಒಂದು ವರ್ಷ ಆಯ್ತು ಅಂತ ಅಷ್ಟೇ. ಸರ್ಕಾರ ರಚನೆಗೆ ಸಹಕರಿಸಿದವರಿಗೆ ನ್ಯಾಯ ಸಿಗಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss