ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ನಡೆದ ಸಿಬಿಐ ದಾಳಿ ಪೂರ್ವನಿಯೋಜಿತವಾಗಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ.
ಉಪಚುನಾವಣೆ ಸಂದರ್ಭದಲ್ಲಿಯೇ ಈ ರೀತಿ ಆಗುತ್ತದೆ ಎಂದರೆ ಇನ್ನೇನು ಅರ್ಥ ಇರಲು ಸಾಧ್ಯ? ನಮ್ಮನ್ನು ಡಿಸ್ಟರ್ಬ್ ಮಾಡಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ತನಿಖಾ ಸಂಸ್ಥೆಗಳ ದುರುಪಯೋಗ ಆಗುತ್ತಿದೆ. ನಮಗೆ ತೊಂದರೆ ಕೊಡಲು ಇದನ್ನು ಮಾಡಿದ್ದಾರೆ ಎಂದಿದ್ದಾರೆ.ಅಧ್ಯಕ್ಷರ ಮನೆ ಮೇಲೆ ದಾಳಿ ಮಾಡಿದ ತಕ್ಷಣ ನಾವು ಹೆದರುವುದಿಲ್ಲ. ಇದರಿಂದ ನಾವು ಹೆದರಿದ್ದೇವೆ ಎಂದುಕೊಂಡರೆ ಅದು ನಿಮ್ಮ ಭ್ರಮೆ ಎಂದಿದ್ದಾರೆ. ಡಿಕೆಶಿ ಅವರು ಸಮರ್ಥರು. ಅವರ ಏನನ್ನಾದರು ಫೇಸ್ ಮಾಡುತ್ತಾರೆ. ಅವರ ಅಧ್ಯಕ್ತೆಯಲ್ಲಿಯೇ ಪಕ್ಷ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.