Wednesday, June 29, 2022

Latest Posts

ಡಿಜಿಟಲೀಕರಣದಿಂದ ಬ್ಯಾಂಕ್’ಗಳು ಗ್ರಾಮೀಣ ಅರ್ಥವ್ಯವಸ್ಥೆಯ ಕತ್ತು ಹಿಸುಕುತ್ತಿದೆ: ದಿನೇಶ್ ಗುಂಡೂರಾವ್ ಆರೋಪ

ಮಂಗಳೂರು: ಡಿಜಿಟಲ್‌ ವಹಿವಾಟು ಪ್ರೋತ್ಸಾಹಿಸುವ ಭರದಲ್ಲಿ ಬ್ಯಾಂಕ್‌ಗಳು ಗ್ರಾಮೀಣ ಅರ್ಥವ್ಯವಸ್ಥೆಯನ್ನೇ ಕತ್ತು ಹಿಸುಕಲು ಹೊರಟಿವೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು ಡಿಜಿಟಲ್‌ ವಹಿವಾಟು ಪ್ರೋತ್ಸಾಹಿಸುವ ಭರದಲ್ಲಿ ಬ್ಯಾಂಕ್‌ಗಳು ಗ್ರಾಮೀಣ ಅರ್ಥವ್ಯವಸ್ಥೆಯನ್ನೇ ಕತ್ತು ಹಿಸುಕಲು ಹೊರಟಿವೆ. ಡಿಜಿಟಲ್ ಜ್ಞಾನವಿಲ್ಲದವರು ಬ್ಯಾಂಕಿಂಗ್ ವ್ಯವಹಾರ ಮಾಡಲೇಬಾರದು ಎಂದು ಇದರರ್ಥವೆ?ಕೋವಿಡ್ ಸಂಕಷ್ಟದ ಕಾಲದಲ್ಲೂ ಇಂತಹ ನಿರ್ಧಾರ ಬೇಕಿತ್ತೆ? ಅರ್ಥಶಾಸ್ತ್ರದ ಅರ್ಥವೇ ಗೊತ್ತಿರದ ಕೇಂದ್ರ ಹಣಕಾಸು ಸಚಿವರ ಕೊಡುಗೆಯೆ ಇದು? ಎಂದು ಅವರು ಪ್ರಶ್ನಿಸಿದ್ದಾರೆ.

ಆನ್‌ಲೈನ್ ಬ್ಯಾಂಕಿಂಗ್ ಸೌಕರ್ಯವಿಲ್ಲದ ಹಾಗೂ ಈ ಬಗ್ಗೆ ಗೊತ್ತಿಲ್ಲದ ಲಕ್ಷಾಂತರ ಮಂದಿ ಇದ್ದಾರೆ.
ಅವರ ವ್ಯವಹಾರವೇನಿದ್ದರೂ ನೇರವಾಗಿ ಬ್ಯಾಂಕ್‌ ಜೊತೆ. ಹೀಗಿರುವಾಗ ಠೇವಣಿ ಮತ್ತು ವರ್ಗಾವಣೆಗೆ ಮಿತಿ ಹೇರಿ ಶುಲ್ಕ ಪಡೆಯುವುದು ಸುಲಿಗೆಯ ಇನ್ನೊಂದು ರೂಪ. ಜನರ ಜೇಬಿಗೆ ಕತ್ತರಿ ಹಾಕುವ ಬ್ಯಾಂಕ್‌ಗಳ ಈ ನಿರ್ಧಾರಕ್ಕೆ ಕೇಂದ್ರ ಕಡಿವಾಣ ಹಾಕಲಿ ಎಂದು ಅವರು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss