Thursday, August 11, 2022

Latest Posts

ಡಿಜಿಟಲ್‌ ತಂತ್ರಜ್ಞಾನದ ಮೂಲಕ ಸರ್ಕಾರದ ಸಾಧನೆ ಪ್ರಚುರಪಡಿಸಲು ನೂತನ ಸಂಕಲ್ಪ: ಡಾ. ಪಿ.ಎಸ್.ಹರ್ಷ

ಹೊಸ ದಿಗಂತ ವರದಿ, ಮೈಸೂರು:

ಡಿಜಿಟಲ್‌ಕ್ಷೇತ್ರವನ್ನು ವಿನೂತನವಾಗಿ ಬಳಸಿಕೊಂಡು ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಮಾಡಲು ಜಿಲ್ಲಾ ವಾರ್ತಾ ಕಚೇರಿಗಳು ಸಜ್ಜಾಗಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದರು.
ಶುಕ್ರವಾರ ಮೈಸೂರಿನಲ್ಲಿ ಮೈಸೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ವಾರ್ತಾ ಇಲಾಖೆಯಿಂದ ನಿರಂತರವಾಗಿ ಕ್ಷಣಕ್ಷಣದ ಸುದ್ದಿಗಳು ಪ್ರಕಟವಾಗುವಂತೆ ಜಿಲ್ಲಾ ಕಚೇರಿಗಳು ಬಲವರ್ಧನೆ ಆಗಬೇಕು. ಅದಕ್ಕೆ ಬೇಕಾದ ನೆರವನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಕಡಿಮೆ ಸಂಖ್ಯೆಯ ನೌಕರರನ್ನು ಹೊಂದಿರುವ ಇಲಾಖೆಯಲ್ಲಿ ನೌಕರರ ನಡುವೆ ಮಾನವೀಯ ಸಂಬoಧ ಸರಿ ಇರಬೇಕು. ಎಲ್ಲರಲ್ಲೂ ಒಂದುತoಡವಾಗಿ ಕೆಲಸ ಮಾಡುವ ಮನೋಭಾವ ಕಟ್ಟೋಣ ಎಂದು ತಿಳಿದರು.
ಅಧಿಕಾರಿಗಳು ಮತ್ತು ನೌಕರರು ವೃತ್ತಿಪರತೆ ಬೆಳಸಿಕೊಳ್ಳಬೇಕು. ಇದಕ್ಕಾಗಿತರಬೇತಿ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುವುದುಎಂದು ಹೇಳಿದರು.
ಪೊಲೀಸ್‌ಡ್ಯೂಟಿ ಮೀಟ್ ಮಾದರಿಯಲ್ಲಿ ವಾರ್ತಾಇಲಾಖೆಯಲ್ಲಿಕುಟುಂಬದ ಸದಸ್ಯರೂ ಸೇರಿದಂತೆ ವರ್ಷದಲ್ಲಿಒಮ್ಮೆಎಲ್ಲರೂ ಸೇರಿ, ಕ್ರೀಡೆ, ಸಾಂಸ್ಕೃತಿಕಚಟುವಟಿಕೆಆಯೋಜಿಸುವ ಬಗ್ಗೆ ಆಲೋಚಿಸಲಾಗಿದೆಎಂದರು.
ಸಭೆಯಲ್ಲಿ ಉಪ ನಿರ್ದೇಶಕ ವಿನೋದ್‌ಚಂದ್ರ, ಸಿ.ಆರ್. ನವೀನ್, ಸಹಾಯಕ ನಿರ್ದೇಶಕರಾದಆರ್. ರಾಜು, ಜೆ. ಮಂಜೇಗೌಡ, ಟಿ.ಕೆ. ಹರೀಶ್, ರಮೇಶ್, ಚಿನ್ನಸ್ವಾಮಿ, ಮಂಜುನಾಥ್, ವಿಷ್ಣುವರ್ಧನ್ ಪ್ರತಿಷ್ಠಾನದ ಕಾರ್ಯದರ್ಶಿ ವಿಜಯಾನಂದ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss